ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಮಕ್ಕಳು ಅನಾಥಾಲಯಕ್ಕೆ...

ಅಲೆಮಾರಿ ಕುಟುಂಬದ ದುಃಖಗಾಥೆ–ಅಪಘಾತದಲ್ಲಿ ತಾಯಿ ದುರ್ಮರಣ
Last Updated 8 ಜನವರಿ 2014, 9:25 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಕೆಂಪಲನಾಥ್ ಬಳಿ ಚಲಿಸುತ್ತಿದ್ದ ಆಟೊ ರಿಕ್ಷಾದಿಂದ ಕೆಳಕ್ಕೆ ಬಿದ್ದು ಮಹಿಳೆಯೊಬ್ಬರು ಸ್ಥಳ ದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೃತ ಮಹಿಳೆಯನ್ನು ಅಲೆಮಾರಿ ಜನಾಂಗಕ್ಕೆ ಸೇರಿದ ಮಂಜಮ್ಮ  (35) ಎಂದು ಗುರುತಿಸಲಾಗಿದೆ.
ಕೋಡಿಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳು ಅನಾಥ: ‘ಮೃತ ಮಂಜಮ್ಮನ ಪತಿ ರವಿ ಎಂಬಾತ ತಾಲ್ಲೂಕಿನ ಕೋಡಿ ಹಳ್ಳಿ ಹೋಬಳಿಯ ಅಂತ ಕೊಂದೊ ಡ್ಡಿಯ ರಾಜಣ್ಣ ಎಂಬುವರ ತೋಟ ದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. 40 ವರ್ಷದ ಈ ವ್ಯಕ್ತಿ ಅಂಗವಿಕಲ. ಈ ದಂಪತಿಗೆ ಗೋವಿಂದರಾಜು (8), ಹರೀಶ್ (6), ಶಂಕರ (4) ಹಾಗೂ ಲಕ್ಷ್ಮ (2) ಎಂಬ ನಾಲ್ಕು ಮಕ್ಕಳಿದ್ದಾರೆ. ಇವರು ಯಾರೂ ಶಾಲೆ ಕಲಿಯುತ್ತಿಲ್ಲ ಹಾಗೂ ಇವರ ಕುಟುಂಬಕ್ಕೆ ಅಲೆಮಾರಿ ಅಥವಾ ಇತರೆ ಯಾವುದೇ ಗುರುತಿನ ಚೀಟಿ ಇಲ್ಲ. ಈ ಹಿನ್ನೆಲೆಯಲ್ಲಿ ತಾಯಿಯನ್ನು ಕಳೆದುಕೊಂಡಿರುವ ಮಕ್ಕಳ ಪಾಲನೆ ಮತ್ತು ಪೋಷಣೆ ಹಾಗೂ ರಕ್ಷಣೆ ಮಾಡುವಲ್ಲಿ ತಂದೆ ಅಸಮರ್ಥ ಆಗಿರುವುದರಿಂದ ಈ ಎಲ್ಲ ಮಕ್ಕಳ ಜವಾಬ್ದಾರಿಯನ್ನು ಇಲಾಖೆಯೇ ತೆಗೆದುಕೊಳ್ಳಲಿದೆ. ಇವರ ಮುಂದಿನ ಭವಿಷ್ಯವನ್ನು ಇಲಾಖೆಯೇ ನಿರ್ವಹಿಸುತ್ತದೆ. ತಂದೆಯು ಮಕ್ಕಳನ್ನು ಸ್ವಯಂ ಪ್ರೇರಣೆಯಿಂದ ಇಲಾಖೆಯ ಜವಾಬ್ದಾರಿಗೆ ಒಪ್ಪಿಸಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎ.ಎಂ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕುಟುಂಬವು ಒಂದು ಊರಿ ನಿಂದ ಮತ್ತೊಂದು ಊರಿಗೆ ವಲಸೆ ಹೋಗುವ ಕುಟುಂಬವಾಗಿದೆ. ಶಾಶ್ವತ ವಾದ ಸೂರಿಲ್ಲದೆ  ಬದುಕುತ್ತಿದ್ದ ಈ ಕುಟುಂಬಕ್ಕೆ ಮೃತ ತಾಯಿ ಮಂಜ ಮ್ಮನೇ ಆಶ್ರಯದಾತಳಾಗಿದ್ದಳು. ಹಾಗಾಗಿ ಇವರನ್ನು ಇಲಾಖೆ ತನ್ನ ವಶಕ್ಕೆ ಪಡೆದಿದೆ. ಕೊನೆಯ ಮಗು ಲಕ್ಷ್ಮನನ್ನು ತಂದೆಯೇ ತನ್ನ ಬಳಿ ಇಟ್ಟುಕೊಳ್ಳುವುದಾಗಿ ತಿಳಿಸಿದ್ದಾರೆ’ ಎಂದರು.

ಮೂರೂ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿ ಅವರ ಮಾರ್ಗದರ್ಶನದಂತೆ ತಾತ್ಕಲಿಕವಾಗಿ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನ ಸಂಸ್ಥೆಯಾದ ಸ್ವಾಧಾರ ಕೇಂದ್ರ ರಾಮನಗರಕ್ಕೆ ಕಳಿಸಿಕೊಡಲಾ ಗುವುದು ಎಂದು ಬಸವರಾಜು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT