ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಂತ್ಯೆ ಮಟನ್

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಂತ್ಯೆ ಮಟನ್
ಬೇಕಾಗುವ ಸಾಮಗ್ರಿ:
ಮೆಂತ್ಯೆ ಸೊಪ್ಪು, ಮಟನ್, ಕೊಬ್ಬರಿ ಹಾಲು, ಬೆಳ್ಳುಳ್ಳಿ, ಹಸಿ ಶುಂಠಿ, ಹಸಿ ಮೆಣಸಿನಕಾಯಿ, ಗರಂ ಮಸಾಲಾ ಪೌಡರ್, ಈರುಳ್ಳಿ, ಟೊಮ್ಯಾಟೊ, ಎಣ್ಣೆ ಹಾಗೂ ಉಪ್ಪು.
ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದರಲ್ಲಿ ರುಬ್ಬಿಟ್ಟುಕೊಂಡ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ಆಮೇಲೆ ಇದಕ್ಕೆ ಮಟನ್ ಹಾಕಿ ಮತ್ತೆ ಫ್ರೈ ಮಾಡಿ.

ನಂತರ ಅದಕ್ಕೆ ಹೆಚ್ಚಿದ ಮೆಂತ್ಯೆ ಸೊಪ್ಪು ಹಾಕಿ ನಂತರ ಹಸಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಫ್ರೈ ಮಾಡಿ. ಇದಕ್ಕೆ ಕೊಬ್ಬರಿ ಹಾಲು ಹಾಗೂ ಗರಂ ಮಸಾಲಾ ಪೌಡರ್ ಹಾಕಿ ಕುದಿಯಲು ಬಿಡಿ. ನಂತರ ಸ್ವಲ್ಪ ಉಪ್ಪು ಹಾಕಿ ಮತ್ತೆ ಕುದಿಸಿ. ಕೊನೆಯಲ್ಲಿ ಕತ್ತರಿಸಿದ ಮೆಂತ್ಯೆ ಸೊಪ್ಪು ಹಾಕಿದರೆ ಮೆಂತ್ಯೆ ಮಟನ್ ರೆಡಿ.
 

ಕೋಳಿ ಸಾರು
ಬೇಕಾಗುವ ಸಾಮಗ್ರಿ:
ಕೋಳಿ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕೊಬ್ಬರಿ, ಟೊಮ್ಯಾಟೊ, ಬೆಳ್ಳುಳ್ಳಿ, ಹಸಿ ಶುಂಠಿ, ಖಾರದ ಪುಡಿ, ಅವಿಜಕಾಳು ಪೌಡರ್, ಗರಂ ಮಸಾಲಾ ಪೌಡರ್, ಎಣ್ಣೆ ಹಾಗೂ ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ಬರುವವರೆಗೂ ಬೇಯಿಸಿ. ನಂತರ ಅದಕ್ಕೆ ಕೋಳಿ ಹಾಕಿ ಮತ್ತೆ ಬೇಯಿಸಿ. ನಂತರ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ, ಮತ್ತು ಕೊತ್ತಂಬರಿ ಪೇಸ್ಟ್ ಹಾಕಿ ಚೆನ್ನಾಗಿ ಕಲಿಸಿ. ನಂತರ ಅದಕ್ಕೆ ಕೊಬ್ಬರಿ ಪೇಸ್ಟ್ ಮತ್ತು ಟೊಮ್ಯಾಟೊ ಪೇಸ್ಟ್ ಹಾಗೂ ಒಂದು ಚಮಚ ಅವಿಜಕಾಳು ಪೌಡರ್, ಗರಂ ಮಸಾಲಾ ಪೌಡರ್, ನಾಲ್ಕು ಚಮಚ ಖಾರದ ಪುಡಿ ಹಾಕಿ ಎದಕ್ಕೆ ಎರಡು ಗ್ಲಾಸ್ ನೀರು ಮತ್ತು ಅಗತ್ಯಕ್ಕೆ ತಕ್ಕಂತೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿ ನಂತರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT