ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕಾಗೆ ಶೀಘ್ರ ವಿಮಾನ ಸೌಲಭ್ಯ

Last Updated 13 ಜನವರಿ 2011, 11:10 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿಯಲ್ಲಿ ನಿರ್ಮಾಣ ಆಗಲಿರುವ ವಿಮಾನ ನಿಲ್ದಾಣದ ಮೂಲಕ ಜಿಲ್ಲೆಯ ಮುಸ್ಲಿಂ ಬಾಂಧವರು ಪವಿತ್ರ ಮೆಕ್ಕಾ- ಮದೀನಾಗಳಿಗೆ ವಿಮಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ನಗರದಲ್ಲಿ ಇತ್ತೀಚೆಗೆ ಏರ್ಪಡಿಸ ಲಾಗಿದ್ದ ಅಖಿಲ ಭಾರತ ಉರ್ದು ಕವಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಮುಸ್ಲಿಂ ಬಾಂಧವರ ಪ್ರಾರ್ಥನೆಗೆ ಸುಸಜ್ಜಿತ ಹಜ್ ಭವನ ಮತ್ತು ನಗರದ ಪ್ರಮುಖ ವೃತ್ತಕ್ಕೆ ಟಿಪ್ಪು ಸುಲ್ತಾನ್ ಅವರ ಹೆಸರು ಇರಿಸಿ, ಅವರ ಸುಂದರ ಪುತ್ಥಳಿ ಅನಾವರಣ ಗೊಳಿಸಲಾಗುವುದು ಎಂದರು.

ಉರ್ದು ಕೇವಲ ಒಂದು ಜಾತಿ ಮತ್ತು ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಅದೊಂದು ಸ್ನೇಹ ಮಯಿ ಭಾಷೆ. ಇಂಥ ಭಾಷೆಯ ಕವಿಗೋಷ್ಠಿ ನಡೆಸುವುದು ಅತ್ಯಗತ್ಯ. ಹಿಂದು- ಮುಸ್ಲಿಂ, ಕ್ರಿಶ್ಚಿಯನ್ ಜನಾಂಗದವರು ಸ್ನೇಹ ಜೀವಿ ಗಳಾಗಿದ್ದು, ಜಿಲ್ಲೆಯ ಇತಿಹಾಸದಲ್ಲಿ ಎಂದಿಗೂ ಜನಾಂಗ ಕಲಹಗಳು ನಡೆದಿಲ್ಲ ಎಂದು ಎಲ್ಲರೂ ಹೆಮ್ಮೆ ಯಿಂದ ಹೇಳುಕೊಳ್ಳುವಂತಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿದ್ದು, ಅನೇಕ ಯೋಜನೆ ಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಅವುಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ತಿಳಿಸಿದರು.

ಸಂಸದೆ ಜೆ.ಶಾಂತಾ, ಬಳ್ಳಾರಿ ಮೇಯರ್ ನೂರ್‌ಜಹಾನ್, ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಖಸ್ರೋ ಖುರೇಶಿ, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮಹ್ಮದ್ ಗೌಸ್ ಬಾಷಾ, ಮುಸ್ಲಿಂ ಧರ್ಮ ಗುರುಗಳಾದ ಗುಲಾಂ ಗೌಸ್ ಸಾಬ್, ಕಣೇಕಲ್ ಸೈಯದ್ ದಾದಾಪೀರ್ ಸಾಹೇಬ್, ಉರ್ದು ಫೆಡರೇಷನ್ ಅಧ್ಯಕ್ಷ ಮಹ್ಮದ್ ರಫೀಕ್, ಕಣೇಕಲ್ ಮೆಹಬೂಬ್ ಸಾಬ್, ಅಯಾಜ್ ಅಹ್ಮದ್, ರಿಜ್ವಾನ್ ಅಹ್ಮದ್, ಜೆ.ಎಸ್.ಸೈಪುಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT