ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ ಖರೀದಿ ಆರಂಭಿಸಿದ ಕೆಎಂಎಫ್‌

ಬೆಲೆ ಕುಸಿತದಿಂದ ಕಂಗಾಲಾದ ರೈತರಿಗೆ ಆಸರೆ
Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೆಕ್ಕೆಜೋಳ ಬೆಲೆ ಕುಸಿತ ದಿಂದ ಕಂಗಾಲಾಗಿರುವ ರೈತರಿಗೆ ನೆರ ವಾಗಲು ಮುಂದಾಗಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಕ್ವಿಂಟಲ್‌ಗೆ ರೂ1,310ರಂತೆ ಮೆಕ್ಕೆಜೋಳ ಖರೀದಿ ಆರಂಭಿಸಿದೆ.

ತುಮಕೂರು ಜಿಲ್ಲೆಯ ಗುಬ್ಬಿ, ಧಾರ ವಾಡದ ರಾಯಾಪುರ, ಹಾಸನ ಹಾಗೂ ಬೆಂಗಳೂರಿನ ರಾಜಾನುಕುಂಟೆ ಯಲ್ಲಿರುವ ಕೆಎಂಎಫ್‌ ನ   ಪಶು ಆಹಾರ ತಯಾರಿಕಾ ಘಟಕಗಳಿಗೆ ರೈತರು ನೇರವಾಗಿ ಮೆಕ್ಕೆಜೋಳ ಮಾರಾಟ ಮಾಡಬಹುದಾಗಿದೆ.

ಈ ನಾಲ್ಕು ಕಾರ್ಖಾನೆಗಳಿಗೆ ವರ್ಷಕ್ಕೆ 50,000 ಟನ್ ಮೆಕ್ಕೆಜೋಳ ಬೇಕು. ರೈತರಿಂದ ನೇರವಾಗಿ ಖರೀದಿಸಲು ಆದ್ಯತೆ ನೀಡಲಾಗಿದೆ. ನಿಗದಿತ ಪ್ರಮಾ ಣದ ಪದಾರ್ಥ ರೈತರಿಂದ ಸಿಗದಿದ್ದರೆ ಮಾತ್ರ ಟೆಂಡರ್ ಮೂಲಕ ವರ್ತಕ ರಿಂದ ಖರೀದಿಸಲು ಕೆಎಂಎಫ್ ಆಡಳಿತ ಮಂಡಳಿ ನಿರ್ಧರಿಸಿದೆ.

ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಗುರು ವಾರ ಕ್ವಿಂಟಲ್ ಗೆ ₨ 1,050 ರಿಂದ  ₨ 1071 ದರದಲ್ಲಿ ಮೆಕ್ಕೆಜೋಳ ಮಾರಾ ಟವಾಗಿದೆ. ಈ ದರಕ್ಕಿಂತ ಕ್ವಿಂಟಲ್ ಗೆ ₨ 250 ಹೆಚ್ಚು ದರವನ್ನು ಕೆಎಂಎಫ್  ರೈತರಿಗೆ ನೀಡುತ್ತಿದೆ.

ಬೆಂಬಲ ಬೆಲೆ ನೀಡಿ ಖರೀದಿಸುವ ಮೆಕ್ಕೆಜೋಳ ನುಸಿ ಬಾಧಿತವಾಗಿರಬಾ ರದು. ಸರ್ಕಾರ ನಿಗದಿಪಡಿಸಿದ ಗುಣಮ ಟ್ಟದಲ್ಲಿರಬೇಕು. ಮಾರಾಟಕ್ಕೆ ಮುನ್ನ ರೈತರು ಹತ್ತಿರದ ಪಶುಆಹಾರ ಘಟಕ ಗಳಿಗೆ ತೆರಳಿ ಅಲ್ಲಿನ ಗುಣ ನಿಯಂತ್ರಣ ವಿಭಾಗದಲ್ಲಿ ಪರೀಕ್ಷೆ ಮಾಡಿಸಬೇಕು. ಘಟಕದ ಅಧಿಕಾರಿಗಳು ಪರಿಶೀಲನೆಗೊ ಳಪಡಿಸಿದ ಮಾದರಿಯ ಮೆಕ್ಕೆಜೋಳ ವನ್ನು ರೈತರು ಅವರು ಸೂಚಿಸಿದ ದಿನ ಪೂರೈಸಬೇಕು.

‘ಉತ್ಪನ್ನವನ್ನು ತರುವಾಗ ಅದನ್ನು ಬೆಳೆದ ಜಮೀನಿನ ಪಹಣಿ ಪ್ರತಿಯನ್ನು ಗ್ರಾಮ ಲೆಕ್ಕಾಧಿಕಾರಿ ಅಥವಾ ಕಂದಾಯ ನಿರೀಕ್ಷಕರಿಂದ ಪಡೆದು ತರ ಬೇಕು. ಮೆಕ್ಕೆಜೋಳವನ್ನು 50 ಕೆ.ಜಿ ಚೀಲದಲ್ಲಿ ತರಬೇಕು. ಪ್ರತಿ ಚೀಲಕ್ಕೆ ಕೆಎಂಎಫ್‌ ಪ್ರತ್ಯೇಕವಾಗಿ ₨10 ಪಾವತಿ ಸಲಿದೆ. ಸಾಗಣೆ ವೆಚ್ಚವನ್ನು ಭರಿಸುವು ದಿಲ್ಲ.

ಒಂದು ವಾರದಲ್ಲಿ ಚೆಕ್ ಮೂಲಕ ರೈತರಿಗೆ ಹಣ ಸಂದಾಯ ಮಾಡಲಾಗುತ್ತದೆ. ಸರ್ಕಾರ ನಿಗದಿಪಡಿ ಸಿರುವ ಗುಣಮಟ್ಟವಿರದೆ ತಿರಸ್ಕೃತವಾ ದರೆ ರೈತರು ತಮ್ಮ ಖರ್ಚಿನಲ್ಲೇ ವಾಪಸ್‌ ಕೊಂಡೊಯ್ಯಬೇಕು. ರೈತರು ಎಷ್ಟೇ ಪ್ರಮಾಣದಲ್ಲಿ ಮೆಕ್ಕೆಜೋಳ ತಂದರೂ ಅದನ್ನು ಖರೀದಿಸಲಾಗು ವುದು’ ಎಂದು ಕೆಎಂಫ್ ನ ರಾಯಾಪು ರದ ಪಶುಆಹಾರ ಘಟಕ ಮುಖ್ಯ ವ್ಯವ ಸ್ಥಾಪಕ ಡಿ.ಅಶೋಕ್ ಹೇಳುತ್ತಾರೆ .

‘ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈಗಾಗಲೇ ಧಾರವಾಡ ಪಶು ಆಹಾರ ಕಾರ್ಖಾನೆ ವ್ಯಾಪ್ತಿಯ 870 ಹಳ್ಳಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ನಾಲ್ಕು ದಿನಗಳಲ್ಲೇ 500 ಟನ್‌ ಮೆಕ್ಕೆ ಜೋಳ ಖರೀದಿಯಾಗಿದೆ. ಏಪ್ರಿಲ್‌ ಕೊನೆ ವಾರದವರೆಗೂ ಖರೀದಿ ಮಾಡ ಲಾಗುವುದು. ಈಗಾಗಲೇ 19 ರೈತರಿಗೆ ಹಣ ಪಾವತಿಸಲಾಗಿದೆ’ ಎಂದರು.

‘ಕೆಎಂಎಫ್ ಮೆಕ್ಕೆಜೋಳ ಖರೀದಿ ಮಾಡುತ್ತಿರುವುದು ಸ್ವಾಗತಾರ್ಹ. ಗೊತ್ತಿರುವವರಷ್ಟೇ ಇಲ್ಲಿಗೆ ಮಾಲು ತರುತ್ತಿದ್ದಾರೆ. ಇತರರಿಗೂ  ಮಾಹಿತಿ ದೊರೆತಲ್ಲಿ ಮಾರುಕಟ್ಟೆಗೆ ಹೋಗುವ ಬದಲಿಗೆ ಇಲ್ಲಿಗೇ ಬರುತ್ತಾರೆ. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸು ತ್ತಿರುವ ಬಗ್ಗೆ ಕೆಎಂಎಫ್‌ ಇನ್ನಷ್ಟು ಪ್ರಚಾರ ನೀಡಬೇಕು’ ಎನ್ನುತ್ತಾರೆ ಅಳ್ನಾ ವರದ ರೈತ ಸುಭಾಷ್‌ ಗದ್ದೀಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT