ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗಾಚಿಪ್ಸ್ ಕಾರ್ಪೊರೇಷನ್‌ನಲ್ಲಿ ಕೆ-ಮೈಕ್ರೊ ವಿಲೀನ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕೆ-ಮೈಕ್ರೊ' ಎಂದೇ ಗುರುತಿಸಿಕೊಂಡಿರುವ `ಕವಾಸಾಕಿ ಮೈಕ್ರೊ ಎಲೆಕ್ಟ್ರಾನಿಕ್ಸ್'ನ ಎಲ್ಲ ಷೇರುಗಳನ್ನೂ ಖರೀದಿಸಿರುವ ಜಪಾನ್‌ನ `ಮೆಗಾಚಿಪ್ಸ್ ಕಾರ್ಪೊರೇಷನ್', ಪೂರ್ಣ ಮಾಲೀಕತ್ವ ಪಡೆದುಕೊಂಡಿದೆ. `ಕೆ-ಮೈಕ್ರೊ' ಈಗ `ಮೆಗಾ ಚಿಪ್ಸ್' ಎಂದು ಮರು ನಾಮಕರಣಗೊಂಡಿದೆ. ಏ. 1ರಂದು `ಕೆ-ಮೈಕ್ರೊ' ಕಂಪೆನಿಮೆಗಾಚಿಪ್ಸ್‌ನಲ್ಲಿ ವಿಲೀನಗೊಂಡಿದೆ.

ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಸಿಸ್ಟೆಂ ಪ್ಲಾನಿಂಗ್ ಮತ್ತು ಪ್ರಾಡಕ್ಟ್ ಅಪ್ಲಿಕೇಷನ್ ವಿಭಾಗದಲ್ಲಿ ಹೆಚ್ಚಿನ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದು `ಮೆಗಾಚಿಪ್ಸ್' ಅಧ್ಯಕ್ಷ ಅಕಿರಾ ಟಕಟಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೋಕಿಯೊದಲ್ಲಿ ಪ್ರಧಾನ ಕಚೇರಿ ಹೊಂದಿರುವ `ಜೆಎಫ್‌ಇ ಹೋಲ್ಡಿಂಗ್ಸ್'ನ ಅಂಗಸಂಸ್ಥೆ `ಮೆಗಾ ಚಿಪ್ಸ್ ಕಾರ್ಪೊರೇಷನ್, 1990ರಿಂದ ಸೆಮಿಕಂಡಕ್ಟರ್ ತಯಾರಿಕೆ ಕ್ಷೇತ್ರದಲ್ಲಿದ್ದು, ತೈವಾನ್, ಜಪಾನ್ ಕಂಪೆನಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT