ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣಗಳ ಪ್ರತಿಕೃತಿ ಪ್ರದರ್ಶನ

Last Updated 19 ಜುಲೈ 2013, 19:39 IST
ಅಕ್ಷರ ಗಾತ್ರ

ಬೆಂಗಳೂರು:  `ನಮ್ಮ ಮೆಟ್ರೊ'ದ ನೆಲದಡಿಯ ನಿಲ್ದಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ಮೇಲೆ ಆ ನಿಲ್ದಾಣಗಳು ಹೇಗೆ ಕಾಣುತ್ತವೆ? ಅವುಗಳ ಮೇಲಿನ ರಸ್ತೆಯ ಭಾಗ ಹೇಗೆ ಕಾಣಿಸುತ್ತದೆ?

ಈ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನದ ಭಾಗವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು ನೆಲದಡಿಯಲ್ಲಿ ನಿರ್ಮಾಣವಾಗುವ ನಾಲ್ಕು ನಿಲ್ದಾಣಗಳ ಮಿನಿ ಪ್ರತಿಕೃತಿಗಳನ್ನು ಮಹಾತ್ಮ ಗಾಂಧಿ ರಸ್ತೆಯ `ರಂಗೋಲಿ- ಮೆಟ್ರೊ ಕಲಾ ಕೇಂದ್ರ'ದ `ವಿಸ್ಮಯ' ಗ್ಯಾಲರಿಯಲ್ಲಿ ಪ್ರದರ್ಶಿಸಿದೆ.

`ಮೇಕಿಂಗ್ ಆಫ್ ದಿ ಮೆಟ್ರೊ- 2' ಎಂಬ ಶೀರ್ಷಿಕೆಯ ಈ ಪ್ರದರ್ಶನದಲ್ಲಿ ಸುರಂಗ ಕೊರೆಯುವ ಯಂತ್ರವೊಂದರ ಮಿನಿ ಪ್ರತಿಕೃತಿಯನ್ನೂ ಇರಿಸಲಾಗಿದೆ. ಜತೆಗೆ ಸುರಂಗ ನಿರ್ಮಾಣ ಕಾಮಗಾರಿಯ ವಿವಿಧ ಛಾಯಾಚಿತ್ರಗಳನ್ನೂ ಪ್ರದರ್ಶಿಸಲಾಗಿದೆ.

ಮೆಟ್ರೊದ ಮೊದಲ ಹಂತದಲ್ಲಿ ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ 4.8 ಕಿ.ಮೀ ಹಾಗೂ ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆಯಿಂದ ಕೆ.ಆರ್.ರಸ್ತೆ ಪ್ರವೇಶ ದ್ವಾರದವರೆಗೆ 4 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪೂರ್ವ- ಪಶ್ಚಿಮ ಕಾರಿಡಾರ್‌ನ ಐದು ನೆಲದಡಿಯ ನಿಲ್ದಾಣಗಳ ಪೈಕಿ ನಾಲ್ಕು ನಿಲ್ದಾಣಗಳ ಮಿನಿ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದೆ.

ಮಿನಿ ಪ್ರತಿಕೃತಿಗಳನ್ನು 1: 200ರ ಅನುಪಾತದಲ್ಲಿ ನಿರ್ಮಿಸಲಾಗಿದೆ. ಈ ಪ್ರದರ್ಶನವು ಆಗಸ್ಟ್ 18ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT