ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಬಳಿ ವಾಸಿಸುವವರಿಗೆ ಹೆಚ್ಚಿನ ತೆರಿಗೆ?

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೆಟ್ರೊ ಮಾರ್ಗದ ಸನಿಹ ವಾಸವಿರುವ ಜನರು ಇನ್ನು ಮುಂದೆ ಅಧಿಕ ತೆರಿಗೆ ಪಾವತಿಸಬೇಕಾಗಿ ಬರಬಹುದು.

ಮೆಟ್ರೊದಂಥ ಆಧುನಿಕ ಸಾರಿಗೆ ವ್ಯವಸ್ಥೆಗೆ ಬಂಡವಾಳ ಒದಗಿಸಲು ಮೀಸಲು ತೆರಿಗೆ ವಿಧಿಸುವ ಮಾರ್ಗೋಪಾಯಗಳನ್ನು ಹುಡುಕುವಂತೆ ಕೇಂದ್ರವು ರಾಜ್ಯಗಳಿಗೆ ಸೂಚನೆ ನೀಡಿದೆ.

ಈ ಸಂಬಂಧ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದು, ಮೆಟ್ರೊ ಮಾರ್ಗದ ಸನಿಹ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ತೆರಿಗೆ ವಿಧಿಸುವ ಕುರಿತು ಅಭಿಪ್ರಾಯ ಕೇಳಿದೆ. ತಮಿಳು ನಾಡು ಹಾಗೂ ಆಂಧ್ರ ಪ್ರದೇಶದಂಥ ಕೆಲವೇ ರಾಜ್ಯಗಳು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ.

`ಮೆಟ್ರೊ ಅತ್ಯಂತ ದುಬಾರಿ ವ್ಯವಸ್ಥೆ. ಹಾಗಾಗಿ ಖರ್ಚು ನಿಭಾಯಿಸುವುದು ಕಷ್ಟದ ಕೆಲಸ. ಅಲ್ಲದೇ ಇನ್ನೂ ಅನೇಕ ನಗರಗಳಲ್ಲಿ ಮೆಟ್ರೊ ಯೋಜನೆಗಳು ಬರುತ್ತಿವೆ. ಆದ್ದರಿಂದ ನಾವು ಆದಾಯ ಗಳಿಸುವ ನೂತನ ಮಾರ್ಗ ಹುಡುಕಬೇಕಾಗುತ್ತದೆ~ ಎಂದು ನಗರಾಭಿವೃದ್ಧಿ ಕಾರ್ಯದರ್ಶಿ ಸುಧೀರ್ ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.

 ಇಂಥ ತೆರಿಗೆಗಳ ಮೂಲಕ ಸಂಗ್ರಹಿಸಿದ ಶೇ 75ರಷ್ಟು ಹಣವು ಕೇಂದ್ರದ ನಗರ ಸಾರಿಗೆ ಮೀಸಲು ನಿಧಿಗೆ ಹೋಗುತ್ತದೆ. ಇದನ್ನು ಮೆಟ್ರೊ ಯೋಜನೆ ವಿಸ್ತರಣೆಗೆ ಬಳಸಬಹುದಾಗಿದೆ. ಕರ್ನಾಟಕ ಸರ್ಕಾರ ಕೆಲ ವಸ್ತುಗಳ ಮೇಲೆ `ಸೆಸ್~ ಮೂಲಕ ಮೂಲ ಸೌಕರ್ಯ ತೆರಿಗೆ ವಿಧಿಸುತ್ತಿದೆ. ಇದನ್ನು ನೋಡಿ ಕೇಂದ್ರವು ಈ ಪ್ರಸ್ತಾವ ಮುಂದಿಟ್ಟಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT