ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸುರಂಗ ನಿರ್ಮಾಣ ಪೂರ್ಣ

ವಿಧಾನಸೌಧ– ಮಿನ್ಸ್ಕ್‌ಚೌಕ
Last Updated 25 ಸೆಪ್ಟೆಂಬರ್ 2013, 20:12 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಮುಂಭಾಗದಿಂದ ಮಿನ್ಸ್ಕ್‌ಚೌಕದವರೆಗೆ ನೆಲದಡಿಯಲ್ಲಿ  ಎರಡನೇ ಸುರಂಗ ಮಾರ್ಗದ ನಿರ್ಮಾಣ ಕಾರ್ಯವು ಬುಧವಾರ  ಬೆಳಿಗ್ಗೆ 11.45ಕ್ಕೆ ಪೂರ್ಣಗೊಂಡಿತು.

ಇದರೊಂದಿಗೆ ಮೆಜೆಸ್ಟಿಕ್‌ನಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಜೋಡಿ ಸುರಂಗ ನಿರ್ಮಾಣ ಕಾರ್ಯ ಪೂರ್ಣಗೊಂಡಂತಾಗಿದೆ.

ಮಾಗಡಿ ರಸ್ತೆ ಪ್ರವೇಶ ದ್ವಾರ, ಮೆಜೆಸ್ಟಿಕ್‌, ಸೆಂಟ್ರಲ್‌ ಕಾಲೇಜು, ವಿಧಾನಸೌಧ, ಮಿನ್ಸ್ಕ್‌‌ಚೌಕ– ಈ ಐದು   ಕಡೆ ನೆಲದಡಿಯಲ್ಲಿ ನಿಲ್ದಾಣಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. ಈ ನಿಲ್ದಾಣಗಳ ನಡುವೆ ಜೋಡಿ ಸುರಂಗ ಮಾರ್ಗವನ್ನು ‘ಹೆಲೆನ್‌’ ಮತ್ತು ‘ಮಾರ್ಗರೀಟಾ’ ಎಂಬ ಎರಡು ದೈತ್ಯ ‘ಸುರಂಗ ಕೊರೆಯುವ ಯಂತ್ರ’ಗಳು (ಟಿಬಿಎಂ) ನಿರ್ಮಿಸಿವೆ.

ಮೆಜೆಸ್ಟಿಕ್‌ನಿಂದ ಪಶ್ಚಿಮದ ಕಡೆ ನಗರ ರೈಲು ನಿಲ್ದಾಣದ ಹತ್ತು ಪ್ಲಾಟ್‌ಫಾರಂಗಳ ಕೆಳಭಾಗದಲ್ಲಿ ಮಾಗಡಿ ರಸ್ತೆ ಪ್ರವೇಶ ದ್ವಾರದೆಡೆಗೆ ಜೋಡಿ ಸುರಂಗ ಕೊರೆಯುವ ಕಾರ್ಯ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಈ ಭಾಗದ ಸುರಂಗವನ್ನು ಹೆಲೆನ್‌ ಮತ್ತು ಮಾರ್ಗರೀಟಾ ಯಂತ್ರಗಳೇ ನಿರ್ಮಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT