ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊದಿಂದ ಆಸ್ತಿಪಾಸ್ತಿಗಳಬೆಲೆ ಹೆಚ್ಚಳ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ದೆಹಲಿಯಲ್ಲಿ ಎಲ್ಲೆಡೆ ಮೆಟ್ರೊ ರೈಲು ಸಂಚಾರ ಆರಂಭವಾದ ಮೇಲೆ ಅಲ್ಲಿನ ಆಸ್ತಿಗಳ ಮೌಲ್ಯದಲ್ಲಿ ಶೇಕಡಾ 25ರಷ್ಟು ಏರಿಕೆಯಾಗಿದೆ. ನಗರದಲ್ಲೂ ಮೆಟ್ರೊ ಯೋಜನೆ ಕಾರ್ಯಗತವಾದ ಮೇಲೆ ಆಸ್ತಿಪಾಸ್ತಿಗಳ ಬೆಲೆ ಹೆಚ್ಚಾಗಲಿದೆ~ ಎಂದು ಜೋನ್ಸ್ ಲ್ಯಾಂಗ್ ಲಾಸಲ್ಲೆ ಕಂಪೆನಿಯ ಉಪಾಧ್ಯಕ್ಷ ಕೆ.ಎಸ್.ಗಿರೀಶ್ ಅಭಿಪ್ರಾಯಪಟ್ಟರು.

`ಮೆಟ್ರೊ ಮಾರ್ಗದ ಅಕ್ಕಪಕ್ಕದ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಬೆಳವಣಿಗೆಯು ವೇಗ ಪಡೆದುಕೊಳ್ಳಲಿದೆ. ಮೆಟ್ರೊ ವ್ಯವಸ್ಥೆ ಇರುವ ಬೇರೆ ದೇಶಗಳ ಮಹಾನಗರಗಳಲ್ಲೂ ಇಂತಹ ಬೆಳವಣಿಗೆ ಆಗಿರುವುದನ್ನು ಕಾಣಬಹುದು~ ಎಂದು ಅವರು ಹೇಳಿದರು.

ಎಚ್‌ಪಿ ಕಂಪೆನಿಯ ಉಪಾಧ್ಯಕ್ಷ ಶ್ರೀಧರ್ ರಾಘವೇಂದ್ರ ಮಾತನಾಡಿ, `ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ಮೆಟ್ರೊ ರೈಲು ಸಂಚಾರ ಆರಂಭವಾದ ಮೇಲೆ ಮೈಸೂರು ರಸ್ತೆ ಕಡೆ ವಾಣಿಜ್ಯ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾಗಲಿವೆ~ ಎಂದು ಭವಿಷ್ಯ ನುಡಿದರು.

ಅಶ್ವಿನ್ ಮಹೇಶ್ ಮಾತನಾಡಿ, `ಮೆಟ್ರೊದ ಮೊದಲನೇ ಹಂತ 24ರಿಂದ 30 ತಿಂಗಳಲ್ಲಿ ಹಾಗೂ ಎರಡನೇ ಹಂತ 2018ರ ವೇಳೆಗೆ ಪೂರ್ಣಗೊಳ್ಳಲಿದೆ. ಆಗ ನಗರದ ಹತ್ತನೇ ಒಂದು ಭಾಗ ಮೆಟ್ರೊ ಸಾರಿಗೆ ವ್ಯವಸ್ಥೆಯ ಪ್ರಭಾವಕ್ಕೆ ಒಳಗಾಗಲಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT