ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದಕೆರೆಪುರ: ಅದಿರು ಸಂಗ್ರಹ ಸಾಗಣೆ ಆರಂಭ

Last Updated 10 ಅಕ್ಟೋಬರ್ 2011, 8:25 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಮೀಪದ ಮೆದಕೆರೆ ಪುರದ ಗಣಿಯಲ್ಲಿ ಸೆಸಾಗೋವಾ ಮತ್ತು ಜಾನ್‌ಮೈನ್ಸ್ ಕಂಪೆನಿಗಳು ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಹಿಂದೆ ಸಂಗ್ರಹಿಸಿಟ್ಟಿದ್ದ ಅದಿರನ್ನು ಸಾಸಲು ರೈಲ್ವೆನಿಲ್ದಾಣಕ್ಕೆ ಸಾಗಿಸಲು ಆರಂಭಿಸಿವೆ. 

 ಎರಡು ತಿಂಗಳ ಹಿಂದೆ ಕೋರ್ಟ್ ನಿರ್ದೇಶನದಂತೆ ಜಿಲ್ಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಭಾನುವಾರ ರಜಾ ದಿನವಾಗಿದ್ದರೂ ಬಿಡುವಿಲ್ಲದೇ ಟ್ರಕ್‌ಗಳ ನಿರಂತರ ಓಡಾಟದಿಂದಾಗಿ ಸೆಸಾ ಗೋವಾ ಮತ್ತು ಜಾನ್‌ಮೈನ್ಸ್ ಕಂಪೆನಿಗಳು ತಲಾ  ಸುಮಾರು 250 ಟ್ರಕ್‌ನಷ್ಟು ಅದಿರನ್ನು ಸಂಗ್ರಹಿಸಿವೆ.

ಎರಡು ತಿಂಗಳಿಂದ ಅದಿರು ಸಾಗಾಣಿಕೆಯ ನಿಲುಗಡೆಯಿಂದಾಗಿ ರೈಲ್ವೆನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಸುಮಾರು ಎರಡು  ಕಿ.ಮೀ. ವರೆಗಿನ ಪ್ರದೇಶದಲ್ಲಿನ ತೋಟ, ಹೊಲಗಳಲ್ಲಿನ ಪೈರು ಮತ್ತು ಗಿಡಮರಗಳು ಗಣಿ ಬಣ್ಣದಿಂದ ಹಚ್ಚಹಸಿರಿನ ಬಣ್ಣಕ್ಕೆ ತಿರುಗುತ್ತಿದ್ದವು.
 
ಇಲ್ಲಿನ ಮೈನ್ಸ್ ಸೂಪರ್‌ವೈಸರ್‌ಗಳ ಪ್ರಕಾರ, ಸುಮಾರು 15-20 ದಿನಗಳವರೆಗೆ ಸಾಗಾಟ ಮಾಡುವಷ್ಟು ಅದಿರು ಸಂಗ್ರಹವಾಗಿದೆ. ಅದು ಮುಗಿದ ನಂತರ ಮತ್ತೆ ಸಾಗಾಟ ನಿಲುಗಡೆಯಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT