ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದುಳಿನ ಚಿತ್ರ ನೀಡುವ 3ಡಿ ನಕ್ಷೆ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮಾನವನ ಮೆದುಳಿನ ಸಮಗ್ರ ಚಿತ್ರಣವನ್ನು ನೀಡುವ ಮೂರು ಆಯಾಮದ (3ಡಿ) ನಕ್ಷೆಯನ್ನು ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದಾರೆ.

ಮೆದುಳಿನ ಬಹುಭಾಗವನ್ನು ಆವರಿಸಿರುವ ಬಿಳಿಯ ವಸ್ತುವಿನ ಅತ್ಯಂತ ಸೂಕ್ಷ್ಮ ರಚನೆಗಳನ್ನು ಈ ನಕ್ಷೆ ಒಳಗೊಂಡಿದೆ. ನೂರು ಜನರ ಮೆದುಳಿನ ಎಂಆರ್‌ಐ ಸ್ಕ್ಯಾನ್‌ಗಳಿಂದ ಪಡೆಯಲಾದ `3ಡಿ~ ಚಿತ್ರಗಳನ್ನು ಬಳಸಿ ನಕ್ಷೆಯನ್ನು ನಿರ್ಮಿಸಲಾಗಿದೆ.

ಹೊಸ ಕಂಪ್ಯೂಟರ್ ತಂತ್ರಜ್ಞಾನದ ನೆರವನ್ನು ಪಡೆದು ಈ ನಕ್ಷೆಯನ್ನು ಸಿದ್ಧಪಡಿಸಲಾಗಿದ್ದು ಮಾನವನ ಮೆದುಳಿನ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಇದು ಚಿಕಿತ್ಸೆಗೆ ಮತ್ತು ಮೆದುಳನ್ನು ಹೆಚ್ಚು ತಿಳಿದುಕೊಳ್ಳಲು ನೆರವಾಗುತ್ತದೆ ಎಂದು ಇಲ್ಲಿಯ ವಿಜ್ಞಾನಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT