ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದುಳು ರೋಗಕ್ಕೆ 51 ಮಕ್ಕಳ ಬಲಿ

Last Updated 1 ಅಕ್ಟೋಬರ್ 2011, 11:15 IST
ಅಕ್ಷರ ಗಾತ್ರ

ಪಾಟ್ನಾ (ಬಿಹಾರ), (ಐಎಎನ್‌ಎಸ್): ಇಲ್ಲಿನ ಗಯಾ ಜಿಲ್ಲೆಯಲ್ಲಿ ಕಳೆದ 7 ವಾರಗಳಿಂದ 51 ಮಕ್ಕಳು ಮೆದುಳು ಸೋಂಕು ರೋಗಕ್ಕೆ ಬಲಿಯಾಗಿ ನಿಗೂಢವಾಗಿ ಮೃತಪಟ್ಟಿವೆ. ಇದಲ್ಲದೇ ಇನ್ನೂ ಮೂರು ಮಕ್ಕಳು ಈ ಸೊಂಕು ರೋಗಕ್ಕೆ ತುತ್ತಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಶನಿವಾರ ತಿಳಿದುಬಂದಿದೆ.

ಬಲಿಯದ ಹೆಚ್ಚಿನ ಮಕ್ಕಳು ಕಡು ಬಡತನದ ಮಹಾದಲಿತ ಕುಟುಂಬಕ್ಕೆ ಸೇರಿವೆ. ಶುಕ್ರವಾರ ಒಂದೇ ದಿನ ಮೂರು ಮಕ್ಕಳು ಈ ನಿಗೂಢ ರೋಗಕ್ಕೆ ಬಲಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರೋಗಕ್ಕೆ ಬಲಿಯಾದ ಎಲ್ಲಾ ಮಕ್ಕಳು ಗಯಾದಿಂದ 100ಕಿಮೀ ದೂರದ ಅನುಗ್ರಹ ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಎನ್‌ಎಂಸಿಎಚ್) ಮೃತಪಪಟ್ಟಿವೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಮಕ್ಕಳು ಪ್ರಜ್ಞಾಹೀನತೆಯೊಂದಿಗೆ ಅತಿಯಾದ ಜ್ವರಕ್ಕೆ ತುತ್ತಾಗಿದ್ದರು ಎಂದು ವರದಿಯಾಗಿದೆ.
ಇಲ್ಲಿಯವರೆಗೆ ಸುಮಾರು 220ಕ್ಕೂ ಅಧಿಕ ಮಕ್ಕಳು ಈ  ನಿಗೂಢ ರೋಗದ ಚಿಕಿತ್ಸೆಗಾಗಿ ದಾಖಲಾಗಿವೆ ಎಂದು ಆಸ್ಪತ್ರೆಯ ಎ.ಕೆ. ರವಿ ತಿಳಿಸಿದ್ದಾರೆ.

ಚಿಕಿತ್ಸೆಗೆ ದಾಖಲಾದ ಹೆಚ್ಚಿನ ಮಕ್ಕಳು ಗಯಾ ಮತ್ತು ಸುತ್ತಲಿನ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಸೇರಿವೆ. 12ಕ್ಕೂ ಅಧಿಕ ಮಕ್ಕಳು ಬದುಕಿಗಾಗಿ ಹೋರಾಟ ನಡೆಸುತ್ತಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT