ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕ್ ಚಾಯ್

Last Updated 5 ಜನವರಿ 2012, 4:50 IST
ಅಕ್ಷರ ಗಾತ್ರ

ಚೆನ್ನೈನ ಯುಎಸ್ ಕಾನ್ಸುಲೇಟ್ ಕಚೇರಿ ಸಹಯೋಗದಲ್ಲಿ ಅಮೆರಿಕದ ವಾಣಿಜ್ಯ ಮಂಡಳಿ ಶುಕ್ರವಾರ `ಮೇಕ್ ಚಾಯ್ ನಾಟ್ ವಾರ್~ (ಇಂಡೊ-ಅಮೆರಿಕನ್) ಹಾಸ್ಯ ಕಾರ್ಯಕ್ರಮ ಆಯೋಜಿಸಿದೆ.

`ಡೆಕ್ಕನ್ ಹೆರಾಲ್ಡ್~  ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕದ ಯುವ ಹಾಸ್ಯ ಕಲಾವಿದರಾದ ಅಜರ್ ಉಸ್ಮಾನ್, ರಾಜೀವ್ ಸತ್ಯಾಲ್ ಹಾಗೂ ಹರಿ ಕೊಂಡಬೋಳು ನಗೆಬುಗ್ಗೆ ಉಕ್ಕಿಸಲಿದ್ದಾರೆ.

ಈ ಮೂವರ ತಂಡ ಅಮೆರಿಕದಲ್ಲಿ ಜನಪ್ರಿಯವಾಗಿದ್ದು, ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದೆ. ಇದೀಗ ಉದ್ಯಾನನಗರಿ ಮಂದಿಗೆ ಹಾಸ್ಯದ ಹೊನಲು ಹರಿಸಲು ಮುಂದಾಗಿದೆ.
ಸ್ಥಳ: ವಿಜಯನಗರ ಸಭಾಂಗಣ, ತಾಜ್ ವಿವಾಂತ, ನಂ41/3, ಎಂ.ಜಿ.ರಸ್ತೆ. ಸಂಜೆ 7.

ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿರುವ ಅಮೆರಿಕನ್ ಕಾರ್ನರ್, ಸೆಲೆಕ್ಟ್ ಬಾಸ್ಕಿನ್ ರಾಬಿನ್ ಮಳಿಗೆಗಳಲ್ಲಿ ಪಾಸುಗಳು ದೊರೆಯುತ್ತವೆ.  ಮಾಹಿತಿಗೆ: 90080 24934.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT