ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ ನಿಖರ ನೋಟ- ಐಎಂಡಿ

ನೈರುತ್ಯ ಮುಂಗಾರು ಮುನ್ಸೂಚನೆ
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರದ ಒಟ್ಟಾರೆ ಉತ್ಪಾದನೆಯಲ್ಲಿ (ಜಿಡಿಪಿ) ಶೇ 15ರಷ್ಟು ಕೊಡುಗೆ ನೀಡುವ ನೈರುತ್ಯ ಮುಂಗಾರು ಹಂಗಾಮು ಈ ಬಾರಿ ವಾಡಿಕೆಯಷ್ಟು ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದ್ದರೂ, ಈ ಕುರಿತ ಅಂತಿಮ ಮುನ್ಸೂಚನೆಗಾಗಿ ಮೇ ತಿಂಗಳ ಮೊದಲ ವಾರದವರೆಗೆ ಕಾಯಲು ನಿರ್ಧರಿಸಿದೆ.

ಈ ಕುರಿತು ನಾಲ್ಕು ವಿವಿಧ ದೇಶಗಳು ಮುನ್ಸೂಚನೆ ಸಿದ್ಧಪಡಿಸಿದ್ದು, ಎಲ್ಲವೂ ವಾಡಿಕೆ ಮಳೆಯನ್ನು ನಿರೀಕ್ಷಿಸಿವೆ ಎಂದು ಕೃಷಿ ಸಚಿವ ಶರದ್ ಪವಾರ್ ಅವರು ಹವಾಮಾನ ಇಲಾಖೆ ಅಧಿಕಾರಗಳ ಜತೆ ಸಭೆ ನಡೆಸಿದ ನಂತರ ಹೇಳಿದರು. ಜೂನ್- ಸೆಪ್ಟೆಂಬರ್‌ವರೆಗಿನ ಅವಧಿಯ ಮೊದಲ ಮುನ್ಸೂಚನೆಯನ್ನು ಏ.26ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಇಲಾಖೆಯ ಮುಖ್ಯಸ್ಥ ಎಲ್.ಎಸ್.ರಾಥೋಡ್ ತಿಳಿಸಿದರು.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ತಾನಗಳು ತೀವ್ರ ಬರಕ್ಕೆ ಸಿಲುಕಿದ್ದು, ಈ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಅಗತ್ಯವಿದೆ.       
ಬುಧವಾರ ಖಾಸಗಿ ಸಂಸ್ಥೆಯೊಂದು ಮುಂಗಾರು ಮುನ್ಸೂಚನೆ ಪ್ರಕಟಿಸಿ, ಈ ಬಾರಿ ವಾಡಿಕೆಗಿಂತ ಸ್ವಲ್ಪ ಹೆಚ್ಚು (ಶೇ 103ರಷ್ಟು) ಮಳೆ ಸುರಿಯಲಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT