ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಗೈ ಸಾಧಿಸಿದ ಜೆಡಿಎಸ್‌

ಅಧ್ಯಕ್ಷ- ರಜ್ಜಬ್ಅಲಿ, ಉಪಾಧ್ಯಕ್ಷೆ- ಹಂಪಮ್ಮ ಅವಿರೋಧ ಆಯ್ಕೆ
Last Updated 13 ಸೆಪ್ಟೆಂಬರ್ 2013, 7:47 IST
ಅಕ್ಷರ ಗಾತ್ರ

ಲಿಂಗಸುಗೂರು(ಮುದಗಲ್ಲ): ತಾಲ್ಲೂ­ಕಿನ ಮುದಗಲ್ಲ ಪಟ್ಟಣ ಪಂಚಾಯಿತಿಗೆ  ಗುರುವಾರ ನಡೆದ ಚುನಾವಣೆ­ಯಲ್ಲಿ ಅಧ್ಯಕ್ಷರಾಗಿ ರಜ್ಜಬ್ಅಲಿ ನಬಿ­ಸಾಬ ಹಳೆಪೇಟೆ ಹಾಗೂ ಉಪಾಧ್ಯಕ್ಷ­ರಾಗಿ ಹಂಪಮ್ಮ ನಾಗನಗೌಡ ಕಿಲ್ಲಾ (ಅಕ್ಕಿ) ಅವಿರೋಧವಾಗಿ ಆಯ್ಕೆ­ಗೊಂಡಿದ್ದಾರೆ.

ಗುರುವಾರ ಬೆಳಿಗ್ಗೆ 11­ಗಂಟೆ­ಯೊಳಗೆ ಜೆಡಿಎಸ್ ಪಕ್ಷದ ಸದಸ್ಯರಾದ ರಜ್ಜಬ್­ಅಲಿ ನಬಿಸಾಬ ಹಳೆಪೇಟೆ, ಎಸ್.ಈರಣ್ಣ ವಡ್ಡರ ಸೂಚಕರು ಹಾಗೂ ಹೇಮಂತ ಈರಣ್ಣ ಅನುಮೋದನೆಯ ನಾಮ­ಪತ್ರವನ್ನು ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಹಂಪಮ್ಮ ನಾಗನಗೌಡ ಕಿಲ್ಲಾ, ರೇವತಿ ಚಂದ್ರಶೇಖರ ಸೂಚಕರು, ರಹೆ­ಮ­ತ್ಬೇಗಂ ಅನುಮೋದನೆ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 1ಗಂಟೆಯ ಸಭೆಯಲ್ಲಿ 19 ಸದಸ್ಯರ ಪೈಕಿ ಜೆಡಿಎಸ್ ಪಕ್ಷದ 11 ಸದಸ್ಯರು ಹಾಜರಿದ್ದರು. ನಾಮಪತ್ರ ಪರಿಶೀಲಿಸಿದ ತಹಶೀಲ್ದಾರ್‌ ಕೆ. ಮಲ್ಲಿನಾಥ ನಾಮಪತ್ರ ಕ್ರಮಬದ್ಧ­ವಾಗಿವೆ ಎಂದು ಸ್ವೀಕರಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಸಾದಿಕ್ ಹಾಜರಿ: ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ಮೊದಲ ಸಭೆ ಆರಂಭಗೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸಾದಿಕ್ಅಲಿ ಎಂಬುವವರು ಪಟ್ಟಣ ಪಂಚಾಯಿತಿಗೆ ಆಗಮಿಸುತ್ತಿದ್ದಂತೆ ರಾಜಕೀಯ ಚರ್ಚೆಗಳು ಬಿರುಸುಗೊಂಡವು. ಈ ಕುರಿತು ಪ್ರಜಾವಾಣಿ ಸಂಪರ್ಕಿಸಿದಾಗ ಚುನಾವಣಾ ಪ್ರಕ್ರಿಯೆಯಿಂದ ದೂರ ಇದ್ದೆ. ಪಪಂ ಮೊದಲ ಸಭೆಗೆ ಹಾಜ­ರಾಗಿರುವೆ ಎಂದು ಸ್ಪಷ್ಟಪಡಿಸಿದರು.

ವಿಜಯೋತ್ಸವ: ಪಟ್ಟಣ ಪಂಚಾ­ಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಅವಿರೋಧ ಆಯ್ಕೆ ಪ್ರಕಟಗೊಳ್ಳು­ತ್ತಿದ್ದಂತೆ ಶಾಸಕ ಮಾನಪ್ಪ ವಜ್ಜಲ ಸಭೆಗೆ ಆಗಮಿಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು, ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸುತ್ತಿರುವುದು ಕಂಡು ಬಂದಿತು.

ಸೇವಾ ಭಾಗ್ಯ: ಐತಿಹಾಸಿಕ ಮುದಗಲ್ಲ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ತಮ್ಮ ಭಾಗ್ಯ. ಶಾಸಕ ಮಾನಪ್ಪ ವಜ್ಜಲ ಹಾಗೂ ಸದಸ್ಯರ ಸಹಕಾರದಿಂದ ಜನತೆಗೆ ಸವಾಲಾಗಿರುವ ಕುಡಿಯುವ ನೀರು, ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿ­ಗಳಿಗೆ ಆದ್ಯತೆ ನೀಡಿ ಜನದ ಸೇವೆ ಮಾಡುವ ಭಾಗ್ಯ ದೊರೆತದ್ದು ತಮ್ಮ ಭಾಗ್ಯ ಎಂದು ನೂತನ ಅಧ್ಯಕ್ಷ ರಜ್ಜಬ್­ಅಲಿ ಹಳೆಪೇಟೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT