ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿಗೆ ಕಸಾಬ್‌ ತೀರ್ಮಾನ

Last Updated 23 ಫೆಬ್ರುವರಿ 2011, 18:50 IST
ಅಕ್ಷರ ಗಾತ್ರ

ಮುಂಬೈ, (ಪಿಟಿಐ/ ಐಎಎನ್‌ಎಸ್): ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಾಬ್ ತನ್ನ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿರುವ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿರುವುದಾಗಿ ಆತನ ವಕೀಲರು ತಿಳಿಸಿದ್ದಾರೆ.

‘ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಹೇಳಿದೆ. ಅದನ್ನು ಶಾಂತವಾಗಿ ಕೇಳಿಸಿಕೊಂಡ ಕಸಾಬ್, ಒಳ್ಳೆಯದು ಹಾಗೇ ಮಾಡೋಣ ಎಂದು ಹೇಳಿದ. ತೀರ್ಪಿನ ಪ್ರತಿಯನ್ನು ಪಡೆದ ಕೂಡಲೇ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕಸಾಬ್ ವಕೀಲೆ ಫರ್ಹಾನಾ ಷಾ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಪತ್ರಿಕೆಗಳನ್ನು ಓದ ಬಯಸಿರುವುದಾಗಿ ಕಸಾಬ್ ಹೇಳಿದ.

ಆದರೆ ಹಾಗೆ ಪತ್ರಿಕೆಗಳನ್ನು ತಂದುಕೊಡುವ ಅಧಿಕಾರ ನನಗೆ ಇಲ್ಲದ್ದರಿಂದ ಜೈಲರ್ ಅವರನ್ನು ಕೇಳುವಂತೆ ತಿಳಿಸಿದೆ. ಆತ ಬರೀ ಹ್ಞೂಂ ಗುಟ್ಟಿದ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT