ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ವಿಚಾರಕಿಯರಿಗೆ ಬಡ್ತಿ: ಸಚಿವರ ಭರವಸೆ

Last Updated 2 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು:  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕಿಯರಿಗೆ ಬಡ್ತಿ ನೀಡುವ ಬಗ್ಗೆ ಇಲಾಖೆಯ ಸಚಿವರಾದ ಕಳಕಪ್ಪ ಬಂಡಿ ಅವರು ಆಶ್ವಾಸನೆ ನೀಡಿದ್ದಾರೆ ಎಂದು ರಾಜ್ಯ ಮೇಲ್ವಿಚಾರಕಿಯರ ಸಂಘದ ಅಧ್ಯಕ್ಷೆ ಬಿ. ಭಾರತಿ ತಿಳಿಸಿದ್ದಾರೆ.

ಮೊದಲ ಬಾರಿ ಸಚಿವರು ಮೇಲ್ವಿಚಾರಕಿಯರ ಜತೆ ನಡೆಸಿದ ಚರ್ಚೆ ಸಂದರ್ಭದಲ್ಲಿ ಈ ಆಶ್ವಾಸನೆ ನೀಡಿದ್ದಾರೆ.  2004ರ ನಂತರ ಮೇಲ್ವಿಚಾರಕಿಯರಿಗೆ ಬಡ್ತಿ ನೀಡಿರುವುದಿಲ್ಲ. 20ಕ್ಕೂ ಹೆಚ್ಚು ವರ್ಷಗಳಿಂದ ಮೇಲ್ವಿಚಾರಕಿಯರ ಹುದ್ದೆಯಲ್ಲಿಯೇ ಸುಮಾರು 500 ಜನರು ಸೇವೆ ಸಲ್ಲಿಸುತ್ತಿರುವ ಬಗ್ಗೆ ಸಚಿವರ ಗಮನಸೆಳೆದಾಗ ಅವರು ಈ ಬಗ್ಗೆ ಚರ್ಚೆ ನಡೆದಿದ್ದು, 31 ಮೇಲ್ವಿಚಾರಕಿಯರಿಗೆ ಶೀಘ್ರ ಬಡ್ತಿ ನೀಡಲಾಗುವುದು ಎಂದು ಹೇಳಿದ್ದಾರೆ.

ವೃಂದ ಮತ್ತು ನೇಮಕಾತಿ ನಿಯಮ ಈಗ ತಿದ್ದುಪಡಿಗೆ ಹೋಗಿದ್ದು ಸದ್ಯದಲ್ಲಿಯೇ 400 ಮೇಲ್ವಿಚಾರಕಿಯರಿಗೆ ಪದೋನ್ನತಿ ನೀಡುವುದಾಗಿ ಭರವಸೆ ನೀಡಿರುವ ಸಚಿವರು, ಭಾಗ್ಯಲಕ್ಷ್ಮಿ ಯೋಜನೆಗೆ ಕಂಪ್ಯೂಟರ್ ಆಪರೇಟರ್ ಮತ್ತು ಪ್ರಥಮ ದರ್ಜೆ ಸಹಾಯಕರನ್ನು ಬಾಹ್ಯ ಮೂಲದಿಂದ ಆಯ್ಕೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT