ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿನ ಬರ ನೀಗಿಸಿದ ಹಸಿರು ಹುಲ್ಲು

Last Updated 4 ಏಪ್ರಿಲ್ 2013, 6:53 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬೇಸಿಗೆ ಬಂತೆಂದರೆ ರೈತರಿಗೆ ಎಲ್ಲಿಲ್ಲದ ಸಂಕಟ. ಸಾಕಿದ ಜಾನುವಾರುಗಳಿಗೆ ಹಸಿರು ಮೇವು ಎಲ್ಲಿಂದ ತರಬೇಕು ಎಂಬ ಚಿಂತೆ ಅವರನ್ನು ಕಾಡಲು ಶುರು ಮಾಡುತ್ತದೆ. ಅದರಲ್ಲಿಯೂ ಬರಗಾಲ ಇದ್ದರಂತೂ ರೈತನ ಪರಿಸ್ಥಿತಿ ಇನ್ನೂ ಕಷ್ಟಮಯ.

ಇಂಥ ಕಷ್ಟದ ದಿನಗಳಲ್ಲೂ ಹಸಿರು ಮೇವು ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ದೇಶ ವಿದೇಶಗಳಿಂದ ಸುಧಾರಿತ ಮೇವು ಬೀಜ ಗಳನ್ನು ಆಮದು ಮಾಡಿಕೊಂಡು ಅವುಗಳನ್ನು ರೈತರಿಗೆ ಉಚಿತವಾಗಿ ವಿತರಿಸುವ ಕೆಲಸ ಮಾಡು ತ್ತಿದೆ. ಮೇವು ಬೀಜ ಬಿತ್ತನೆ ಮಾಡಿ ಅದರಿಂದ ಜಾನುವಾರುಗಳಿಗೆ ಹಸಿರು ಮೇವು ದೊರೆಯಲಿ ಎಂಬುದು ಸರ್ಕಾರದ ಆಶಯ.

ಆದರೆ ಬಹಳಷ್ಟು ರೈತರು ಇತ್ತ ಗಮನ ಹರಿಸುವುದಿಲ್ಲ. ಹೀಗಾಗಿ ಅಂಥವರು ದನಕರುಗಳು ಮೇವಿನ ಕೊರತೆಯಿಂದ ಬಳಲುತ್ತವೆ. ಆದರೆ ಇದಕ್ಕೆ ಅಪವಾದ ಎಂಬಂತೆ ದೊಡ್ಡೂರು ಗ್ರಾಮದಲ್ಲಿ ಲಕ್ಷ್ಮೇಶ್ವರದ ಯುವಕರು ನಡೆಸುತ್ತಿರುವ  ಡೈರಿ ಫಾರ್ಮ್‌ನಲ್ಲಿ ಹೇರಳವಾಗಿ ಮೇವು ಹುಲ್ಲು ಬೆಳೆಸಿದ್ದು ಇದು ಅವರ ಜಾನು ವಾರುಗಳ ಹೊಟ್ಟೆ ತುಂಬುತ್ತಿದೆ.

ಲಕ್ಷ್ಮೇಶ್ವರದ ವೀರೇಶ ಮಾಮನಿ ಮತ್ತು ಪ್ರಕಾಶ ಗುಜರಿ ಎಂಬ ಯುವಕರು ದೊಡ್ಡೂರು ಗ್ರಾಮ ದಲ್ಲಿ ಡೈರಿ ಫಾರ್ಮ್ ನಡೆಸುತ್ತಿದ್ದು ಅವರ ಡೈರಿಯಲ್ಲಿ ಹತ್ತಾರು ಆಕಳುಗಳು ನಿತ್ಯ ಹತ್ತಾರು ಲೀಟರ್ ಹಾಲು ಕೊಡುತ್ತಿವೆ. ಈ ಆಕಳುಗಳಿಗೆಲ್ಲ ಫಾರ್ಮ್‌ನ ಹೊಲದಲ್ಲಿ ಬೆಳೆದು ನಿಂತಿರುವ ಎಂಟಡಿ ಎತ್ತರದ ಮೇವು ಬಹಳ ಸಹಕಾರಿ ಆಗಿದೆ. ರೈತರು ಹಸಿರು ಮೇವಿನ ಕೊರತೆಯಿಂದ ನರಳಬಾರದು.

ಅವರ ದನಕರುಗಳಿಗೆ ಬೇಕಾದ ಮೇವನ್ನು ಅವರೇ ಬೆಳೆದುಕೊಳ್ಳಲಿ ಎಂಬ ಉದ್ದೇಶದಿಂದ ಸರ್ಕಾರ ಪಶು ಇಲಾಖೆ ಮೂಲಕ ರೈತರಿಗೆ ಉಚಿತ ಮೇವು ಬೀಜ ನೀಡಿದೆ ಎಂದು ಪಶು ವೈದ್ಯಾಧಿಕಾರಿ ಡಾ.ಎನ್.ಎ. ಹವಳದ ತಿಳಿಸುತ್ತಾರೆ.

ಈ ಕುರಿತು ಪ್ರಜಾವಾಣಿಗೆ ಮಾಹಿತಿ ನೀಡಿದ ಅವರು 2011-12ರಲ್ಲಿ ತಾಲ್ಲೂಕಿನ ಪಶು ವೈದ್ಯ ಕೀಯ ಇಲಾಖೆಯಿಂದ ಸ್ವರ್ಗಂ ಹೆಸರಿನ 4 ಕೆಜಿ ತೂಕದ 20 ಪಾಕೀಟ್ ಹಾಗೂ ಅದೇ ಹೆಸರಿನ 5 ಕೆಜಿ ತೂಕದ 1500 ಪಾಕೀಟ್‌ಗಳನ್ನು ವಿತರಿಸಲಾಗಿದೆ. ಅದರಂತೆ ಸೌಥ್ ಆಫ್ರಿಕನ್ ಟಾಲ್ 6 ಕೆಜಿಯ 30 ಪಾಕೀಟ್‌ಗಳನ್ನು ನೀಡ ಲಾಗಿದ್ದು 2012-13ರಲ್ಲಿ ಹೈಬ್ರೀಡ್ ಜ್ವಾರ್ ಹೆಸರಿನ 5 ಕೆ.ಜಿ ತೂಕದ 1000 ಪಾಕೀಟ್ ಅದರ ಜೊತೆಗೆ ಆಫ್ರಿಕನ್ ಮ್ೇ ಟಾಲ್ ಹೆಸರಿನ 900 ಪಾಕೀಟ್‌ಗಳನ್ನು ತರಿಸಲಾಗಿದ್ದು ಈಗಾಗಲೇ ಕೆಲವರು ಮೇವು ಬೀಜ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಮೇವಿನ ಬೀಜದ ದಾಸ್ತಾನು ಇದ್ದು ಅಗತ್ಯ ಇದ್ದರೆ ಇನ್ನೂ ಹೆಚ್ಚಿನ ಬೀಜ ತರಿಸಲಾಗುವುದು ಞಎಂದು ಅವರು ಹೇಳಿದರು. ನೀರಾವರಿ ಸೌಲಭ್ಯ ಹೊಂದಿರುವ ರೈತರು ಮೇವು ಬೀಜ ಬಿತ್ತಬಹುದು. ಆದರೆ ಅಂಥವರು ಕೂಡ ಮೇವು ಬೆಳೆಯಲು ಮುಂದೆ ಬರುತ್ತಿಲ್ಲ ಎಂಬುದು ಅವರ ಅಳಲು.

ಪಶು ವೈದ್ಯಕೀಯ ಇಲಾಖೆ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ 33,066 ಎತ್ತು-ಆಕಳು, 11,000 ಎಮ್ಮೆ, 1ಲಕ್ಷ 15 ಸಾವಿರ ಕುರಿ ಹಾಗೂ 37,000 ಆಡು ಇವೆ. ಪ್ರತಿ ವರ್ಷ ಜಾನುವಾರುಗಳಿಗೆ ಮೇವು ಹೊಂದಿಸುವುದೇ ರೈತರಿಗೆ ದೊಡ್ಡ ಸವಾಲಾಗಿದ್ದು ಈಗ ಲಭ್ಯ ಇರುವ ಹೊಟ್ಟು ಹಾಗೂ ಮೇವಿನ ಬೆಲೆ ಬಡ ರೈತನ ಕೈಗೆ ನಿಲುಕದಷ್ಟು ತುಟ್ಟಿಯಾಗಿದೆ.

ಕಾರಣ ರೈತರು ತಾವೇ ಸ್ವತಃ ತೋಟದಲ್ಲಿ ಮೇವು ಬೆಳೆಯಲು ಆಸಕ್ತಿ ತೋರಿಸಬೇಕು. ಅಂದಾಗ ಮಾತ್ರ ದನಕರುಗಳಿಗೆ ಮೇವು ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT