ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಯಂತ್ರಕ್ಕೆ ಸಬ್ಸಿಡಿ ಕೊಡಿ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಜ್ಯದ ಬಹಳಷ್ಟು ರೈತರು ಕೃಷಿಗೆ ಪೂರಕವಾಗಿ ಜಾನುವಾರು ಸಾಕುತ್ತಿದ್ದಾರೆ. ಈಗ ಮೇವಿನ ಕೊರತೆಯಿಂದಾಗಿ ಹೈನುಗಾರಿಕೆ ದುಸ್ತರವಾಗಿದೆ. ಕೆಲವು ರೈತರು ತಾವೇ ಸುಧಾರಿತ ಮೇವು ಬೆಳೆಯುತ್ತಾರೆ.
 
ಬಹುತೇಕ ರೈತರು ಬತ್ತ, ರಾಗಿ ಹುಲ್ಲು, ಜೋಳದ ದಂಟುಗಳನ್ನು ಮೇವಾಗಿ ಬಳಸುತ್ತಾರೆ. ಈ ಒಣ ಮೇವುಗಳನ್ನು ಕತ್ತರಿಸಲು ಈಗ ಸುಧಾರಿತ ಯಂತ್ರಗಳನ್ನು ಬಳಸದೇ ಇರುವುದರಿಂದ ಶೇ.30ರಷ್ಟು ಮೇವು ಹಾಳಾಗಿ ಕೊಟ್ಟಿಗೆಯ ಕಸವಾಗುತ್ತಿದೆ.

ಮಾರುಕಟ್ಟೆಯಲ್ಲಿ ಸಿಗುವ ಮೇವು ಕತ್ತರಿಸುವ ಯಂತ್ರದ ಬೆಲೆ 2,0000ರೂ. ಈ ಯಂತ್ರ ಖರೀದಿಸುವ ಶಕ್ತಿ ಅನೇಕ ರೈತರಿಗೆ ಇಲ್ಲ. ಆದ್ದರಿಂದ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಮೇವು ಕತ್ತರಿಸುವ ಯಂತ್ರ ಖರೀದಿಸುವ ರೈತರಿಗೆ ಶೇ 90 ರಷ್ಟು ಸಹಾಯಧನ ಘೋಷಿಸಿದರೆ ರೈತರಿಗೆ ಅನುಕೂಲವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT