ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಸಾಫ್ಟ್‌ಗೆ ಹ್ಯಾಕರ್ ದಾಳಿ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  `ಎವಿಲ್ ಶಾಡೋ~ ಎಂಬ ಹೆಸರಿನ ಚೀನಾದ ಹ್ಯಾಕರ್‌ಗಳ ತಂಡವೊಂದು ಮೈಕ್ರೋಸಾಫ್ಟ್‌ನ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಿಂದ ಅಕ್ರಮವಾಗಿ ಮಾಹಿತಿ ಪಡೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ವೆಬ್ ಸೈಟ್ www.microsoftstore.co.in ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

`ಈ ಬಗ್ಗೆ ಗ್ರಾಹಕರಿಗೆ ಮಾರ್ಗಸೂಚಿಗಳನ್ನು ಕಳುಹಿಸಲಾಗಿದ್ದು, ವೆಬ್‌ಸೈಟ್ ಅನ್ನು ಮೊದಲಿನ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕಂಪಪೆನಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ~ ಎಂದು ಮೈಕ್ರೋಸಾಫ್ಟ್ ವಕ್ತಾರೆ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಮಾಹಿತಿ ಸೋರಿಕೆಯಿಂದಾಗಿ  ಅನಾನುಕೂಲವಾಗಿರುವುದರಿಂದ ಕಂಪೆನಿ ತನ್ನ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.

ಕಳೆದ ಜನವರಿ- ಜೂನ್ ನಡುವೆ 117 ಸರ್ಕಾರಿ ವೆಬ್‌ಸೈಟ್‌ಗಳು ಹ್ಯಾಕರ್‌ಗಳ ದಾಳಿಗೆ ಒಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT