ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಸೌಂದರ್ಯ ಜೋಗದ ವೈಭವ

Last Updated 8 ಜುಲೈ 2012, 12:55 IST
ಅಕ್ಷರ ಗಾತ್ರ

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ಮುಂಗಾರು ಮಳೆಯ ಆರಂಭದೊಂದಿಗೆ ತನ್ನ ಪ್ರಕೃತಿದತ್ತ ಸೌಂದರ್ಯ ಮೈದುಂಬಿಕೊಂಡು, ಧುಮುಕುತ್ತಾ ನಿಸರ್ಗದ ಮಡಿಲಿನಲ್ಲೆಗ ಅದ್ಭುತ ಮುಕುಟದಂತೆ ಕಂಗೊಳಿಸುತ್ತಿದೆ.

ಒಣಗಿ ನಿಂತ ಬಂಡೆಗಳ ಮೇಲೆಲ್ಲಾ ಹಸಿರು ಪಾಚಿ ಹುಲ್ಲು ಬೆಳೆದು, ಸುತ್ತಲಿನ ಪರಿಸರದ ಗಿಡ-ಮರಗಳ ನಡುವೆ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಮುಸುಕಿದ ಮಂಜಿನ ನಡುವೆ ಹಾಲ್ನೊರೆ ಚೆಲ್ಲುತ್ತಾ ರಾಜ, ರಾಣಿ, ರೋರರ್, ರಾಕೆಟ್ ಕವಲುಗಳು ಕಣಿವೆಯೊಳಗೆ ಧುಮ್ಮುಕ್ಕುವ ದೃಶ್ಯ ನೋಡಲು ಅವರ್ಣನೀಯ ಎನ್ನುವುದು ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗಳ ಅಭಿಮತ. 

ಅತ್ತ ಭೋರ್ಗರೆತವೂ ಇಲ್ಲದೇ, ಇತ್ತ ನೀರವತೆಯೂ ಇಲ್ಲದೇ, ಗಾಂಭೀರ್ಯದಿಂದ ಬಳುಕುತ್ತಾ ಧರೆಗೆ ಇಳಿಯುವ ಶರಾವತಿಯ ಸೌಂದರ್ಯ ಆಸ್ವಾದನೆಗೆ ಇದು ಸಕಾಲ ಎಂಬುದು ಇಲ್ಲಿನ ಪ್ರವಾಸಿ ಮಾರ್ಗದರ್ಶಕರ (ಗೈಡ್) ಅನಿಸಿಕೆ.

ಜಲಪಾತದ ಕೆಳಭಾಗಕ್ಕಿಳಿದು ಇಳಿದು ಸ್ನಾನ ಮಾಡಿ ದಣಿವಾರಿಸಿಕೊಳ್ಳುವ ಪ್ರವಾಸಿಗರು, ಸಂಜೆಯಾಗುತ್ತಿದ್ದಂತೆ ಸಂಗೀತ ಕಾರಂಜಿಯ ನರ್ತನದ ಸೊಬಗು ಸವಿದು, ಉಲ್ಲಸಿತರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT