ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಬಂದ ಸ್ವಾಮಿ ವಿವೇಕಾನಂದ!

Last Updated 6 ಡಿಸೆಂಬರ್ 2012, 9:39 IST
ಅಕ್ಷರ ಗಾತ್ರ

ಮೈಸೂರು: ಚಿಕಾಗೋ ವಿಶ್ವಸಮ್ಮೇಳ ನದಲ್ಲಿ ಅಧ್ಯಾತ್ಮಿಕ ಭಾಷಣ ಮಾಡಿ ವಿಶ್ವದ ಗಮನ ಸೆಳೆದಿದ್ದ ಸಂತ, ದಾರ್ಶನಿಕ `ಸ್ವಾಮಿ ವಿವೇಕಾನಂದರು' ಮತ್ತೆ ಮೈಸೂರಿಗೆ ಬಂದಿದ್ದು, ಎರಡು ದಿನ ಇಲ್ಲಿಯೇ ಇರಲಿದ್ದಾರೆ!

ಸ್ವಾಮಿ ವಿವೇಕಾನಂದರ ಸಂದೇಶ ಹೊತ್ತ `ವಿವೇಕ್ ಎಕ್ಸ್‌ಪ್ರೆಸ್' ರೈಲು ಮೈಸೂರಿಗೆ ಬಂದಿದ್ದು, ಅಶೋಕಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಬಂದಿರುವ ಈ ರೈಲು ಎರಡು ದಿನ ಇಲ್ಲಿಯೇ ನಿಲುಗಡೆಯಾಗಲಿದೆ.

ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ (1863- 1902) ಅವರಿಗೆ ಗೌರವ ಸೂಚಿಸಲು ಭಾರತೀಯ ರೈಲ್ವೆಯು ವಿವೇಕಾನಂದ, ಪರಮಹಂಸ ಹಾಗೂ ಶಾರದಾದೇವಿ ಅವರ ಭಾವಚಿತ್ರ, ಸಂದೇಶ, ಅವರು ಭೇಟಿ ನೀಡಿದ ಸ್ಥಳಗಳ ಮಾಹಿತಿಯುಳ್ಳ ರೈಲನ್ನು ಪರಿಚಯಿಸಿದೆ. 2013ರ ಜನವರಿ 12ಕ್ಕೆ ದೇಶದಾದ್ಯಂತ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.

ಪಶ್ಚಿಮ ಬಂಗಾಳದ ಗಂಗಾ ನದಿ ದಂಡೆಯಲ್ಲಿರುವ ಬೇಲೂರು ಮಠ, ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಸ್ಮಾರಕ, ಚಿಕಾಗೊ ವಿಶ್ವಸಮ್ಮೇಳನದಲ್ಲಿ ವಿವೇಕಾನಂದರು ಭಾಗವಹಿಸಿದ್ದು, ಅವರ ಮಲಗುವ ಕೋಣೆ, ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ವಿವರಗಳನ್ನು ಒಳಗೊಂಡ ನಾಮಫಲಕ, ಸಂದೇಶಗಳನ್ನು ಈ ರೈಲಿನಲ್ಲಿ ಅಳವಡಿಸಲಾಗಿದೆ. 

ಐದು ಬೋಗಿಗಳ ರೈಲಿನಲ್ಲಿ ಎರಡು ಬೋಗಿಗಳನ್ನು ವಿವೇಕಾನಂದರ ಸಂದೇಶ, ಭಾವಚಿತ್ರಗಳಿಗೆ ಮೀಸಲಾಗಿ ಇಡಲಾಗಿದೆ. ಇದರಲ್ಲಿ, `ಎಲ್ಲರಲ್ಲೂ ದೇವರನ್ನು ಕಾಣು, ದೇವರು ನಿನ್ನೊಳಗೇ ಇದ್ದಾನೆ, ದೇವರ ಹುಡುಕಾಟದಲ್ಲಿ ಪ್ರಯತ್ನ ನಿರಂತರವಾಗಿರಲಿ, ದೇವರಲ್ಲಿ ನಂಬಿಕೆ ಇಡು, ದೇವರ ಪ್ರೀತಿ, ಕರುಣೆ ಅತ್ಯಗತ್ಯ' ಎಂಬ ವಿವೇಕಾನಂದರ ಸಂದೇಶ ಗಮನ ಸೆಳೆಯುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ವಿವೇಕ್ ಎಕ್ಸ್‌ಪ್ರೆಸ್ ರೈಲನ್ನು ವೀಕ್ಷಿಸಬಹುದು.

ಉದ್ಘಾಟನೆ: ವಿವೇಕ್ ಎಕ್ಸ್‌ಪ್ರೆಸ್ ರೈಲು ಪ್ರದರ್ಶನಕ್ಕೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಚಾಲನೆ ನೀಡಿದರು. ಸ್ವಾಮಿ ವಿಭಾಕರಾ ನಂದಜೀ, ನೈರುತ್ಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನೂಪ ದಯಾನದಂದ್ ಸಾಧು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT