ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ

Last Updated 4 ಸೆಪ್ಟೆಂಬರ್ 2011, 11:35 IST
ಅಕ್ಷರ ಗಾತ್ರ

ಯಳಂದೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಉಪ್ಪಾರ ವಿದ್ಯಾರ್ಥಿ ನಿಲಯದ ಆಸ್ತಿಗೆ ನೇಮಕಗೊಂಡಿದ್ದ ಆಡಳಿತಾಧಿಕಾರಿ ತೆರವುಗೊಳಿಸಿ ಹಾಗೂ ಅಲ್ಲಿನ ನಿಷೇಧಾಜ್ಞೆಯನ್ನು ವಾಪಸ್ಸು ಪಡೆದಿರುವ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಕ್ರಮವನ್ನು ಖಂಡಿಸಿ ತಾಲ್ಲೂಕು ಭಗೀರಥ ಸಂಘದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಟಿಟಿಎಲ್ ಟ್ರಸ್ಟ್‌ನ ಕುತಂತ್ರದಿಂದ ಜಿಲ್ಲಾಧಿಕಾರಿಗಳು ಉಪ್ಪಾರ ಜನಾಂಗಕ್ಕೆ ದ್ರೋಹ ಎಸೆಗಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇದು ಉಪ್ಪಾರ ಜನಾಂಗಕ್ಕೆ ಸೇರಿದ ಆಸ್ತಿ ಎಂದು ಸಭೆಯಲ್ಲಿ ತೀರ್ಮಾನಿಸಿದೆ. ಹಾಗಾಗಿ ಇದು ಉಪ್ಪಾರ ಜನಾಂಗಕ್ಕೆ ಸೇರಿದ್ದಾಗಿದೆ.

ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮ ಕಾನೂನು ಬಾಹಿರವಾಗಿದೆ. ಮತ್ತೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ನಿಷೇಧಾಜ್ಞೆಯನ್ನು ಮತ್ತೆ ಜಾರಿ ಮಾಡಬೇಕು ಹಾಗೂ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ಬಳೇ ಪೇಟೆಯಿಂದ ಹೊರಟ ಪ್ರತಿಭಟನಾಕಾರರು, ಬಸ್ ನಿಲ್ದಾಣ, ಗಾಂಧಿ ಸರ್ಕಲ್‌ನ ಮಾರ್ಗವಾಗಿ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ್‌ಗೆ ಮನವಿ ಪತ್ರವನ್ನು ಸಲ್ಲಿಸಿದರು.

  ಮಾಜಿ ಜಿ.ಪಂ. ಸದಸ್ಯ ಯೋಗೇಶ್, ತಾಲ್ಲೂಕು ಭಗೀರಥ ಸಂಘದ ಅಧ್ಯಕ್ಷ ರಾಜು, ಕಾರ್ಯದರ್ಶಿ ವೆಂಕಟೇಶ್, ವೈ.ಎನ್. ಮಹದೇವಶೆಟ್ಟಿ, ಕಂದಹಳ್ಳಿ ನಂಜುಂಡಸ್ವಾಮಿ, ಸಿದ್ಧಪ್ಪ, ಕರವೇ ತಾಲ್ಲೂಕು ಅಧ್ಯಕ್ಷ ವೈ.ಆರ್. ರಂಗರಾಜು, ವಿ. ನಾಗರಾಜು, ವೈ.ಕೆ. ಮೋಳೆ ನಾಗರಾಜು, ನಾಗರಾಜು, ಬಂಗಾರು, ರಂಗಸ್ವಾಮಿ, ಶಿವಣ್ಣ, ಕೆಸ್ತೂರು ರಂಗಸ್ವಾಮಿ, ಮರಿಸ್ವಾಮಿ, ವೈ.ಸಿ. ಮಹದೇವಸ್ವಾಮಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT