ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಗೆ 12ನೇ ಸ್ಥಾನ: ಶೇ 73.73 ಫಲಿತಾಂಶ

Last Updated 24 ಮೇ 2012, 6:15 IST
ಅಕ್ಷರ ಗಾತ್ರ

ಮೈಸೂರು:  ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟ ಗೊಂಡಿದ್ದು, ಜಿಲ್ಲೆ ಶೇ 73.73 ಫಲಿತಾಂಶ ಪಡೆಯುವ ಮೂಲಕ 12ನೇ ಸ್ಥಾನ ಪಡೆದಿದೆ. 2011ರಲ್ಲಿ ಶೇ 59 ಫಲಿತಾಂಶ ಪಡೆದು 14ನೇ ಸ್ಥಾನದಲ್ಲಿದ್ದತ್ತು.

ಜಿಲ್ಲೆಯ 68 ಸರ್ಕಾರಿ, 28 ಅನುದಾನಿತ ಹಾಗೂ 95 ಅನುದಾನ ರಹಿತ (ಒಟ್ಟು 191) ಕಾಲೇಜುಗಳ 30,171 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 18,333 ಪುನರಾವರ್ತಿತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 60.76 ಫಲಿತಾಂಶ ಲಭ್ಯವಾಗಿದೆ. 21,924 ನೂತನ ವಿದ್ಯಾರ್ಥಿಗಳ ಪೈಕಿ 16,165 ವಿದ್ಯಾರ್ಥಿಗಳು ತೇರ್ಗಡೆ ಆಗ್ದ್ದಿದು, ಶೇ 73.73 ಫಲಿತಾಂಶ ಬಂದಿದೆ.

ಕಲಾ ವಿಭಾಗದಲ್ಲಿ 8793, ವಿಜ್ಞಾನ ವಿಭಾಗ 6396 ಹಾಗೂ ವಾಣಿಜ್ಯ ವಿಭಾಗದಲ್ಲಿ 6725 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿ ದ್ದರು. ಕ್ರಮವಾಗಿ 6124, 5126 ಹಾಗೂ 4915 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶ್ರೇಯಸ್ ಅನಂತ ನಾಯಕ್ ವಿಜ್ಞಾನ ವಿಭಾಗ ದಲ್ಲಿ 590 ಅಂಕ ಪಡೆದಿದ್ದು (ಶೇ 98.33) ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ (ಎಸ್‌ವಿಇಐ) ಪ್ರಿನ್ಸಿ ಡಿ~ಸೋಜಾ 585 ಅಂಕ (ಶೇ 97.5),ಕಲಾ ವಿಭಾಗದಲ್ಲಿ ಎಸ್. ಮಾನಸ 561 ಅಂಕ (ಶೇ 93.5) ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ.

ಸದ್ವಿದ್ಯಾ ಕಾಲೇಜು: ಪರೀಕ್ಷೆಗೆ ಹಾಜ ರಾದ 503 ವಿದ್ಯಾರ್ಥಿಗಳಲ್ಲಿ 221 ಅತ್ಯುನ್ನತ ದರ್ಜೆ, 229 ಪ್ರಥಮ ದರ್ಜೆ ಹಾಗೂ 24 ವಿದ್ಯಾರ್ಥಿಗಳು ದ್ವಿತೀಯ  ದರ್ಜೆ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಸಿಂಧುಶ್ರೀ 588 ಅಂಕ (ಶೇ 98) ಪಡೆದಿದ್ದಾರೆ.

ಮರಿಮಲ್ಲಪ್ಪ ಕಾಲೇಜು: ಪರೀಕ್ಷೆಗೆ ಹಾಜರಾದ 922 ವಿದ್ಯಾರ್ಥಿಗಳಲ್ಲಿ 872 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. 228 ಅತ್ಯುನ್ನತ ದರ್ಜೆ, 506 ಪ್ರಥಮ ದರ್ಜೆ, 107 ದ್ವಿತೀಯ ಹಾಗೂ 31 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಜೆಎಸ್‌ಎಸ್(ಸರಸ್ವತಿಪುರಂ): ಕಾಲೇಜಿನ 739 ವಿದ್ಯಾರ್ಥಿನಿಯರು ತೇರ್ಗಡೆ ಆಗಿದ್ದು, 35 ಉನ್ನತ ದರ್ಜೆ, 294 ಪ್ರಥಮ ದರ್ಜೆ, 151 ದ್ವಿತೀಯ ಹಾಗೂ 80 ವಿದ್ಯಾರ್ಥಿನಿಯರು ತೃತೀಯ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಕಾಲೇಜಿಗೆ ಶೇ 76 ಫಲಿತಾಂಶ ಲಭ್ಯವಾಗಿದೆ.

ಕಲಾ ವಿಭಾಗದಲ್ಲಿ ಡಿ.ಪೂರ್ಣಿಮಾ 518, ವಾಣಿಜ್ಯ ವಿಭಾಗದಲ್ಲಿ ದೇವಾಂಶಿ ಶರ್ಮ 576 ಹಾಗೂ ವಿಜ್ಞಾನ ವಿಭಾಗದಲ್ಲಿ ಎ.ವಿ.ಸ್ಫೂರ್ತಿ 540 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಹರ್ಷಿ ಕಾಲೇಜು: ವಿಜ್ಞಾನ ವಿಭಾಗದಲ್ಲಿ ಶೇ 80 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 90 ಫಲಿತಾಂಶ ಬಂದಿದೆ. ಕೆ.ಎಸ್.ಅನೂಪ್ ಕೋಟಿ 584 (ವಿಜ್ಞಾನ ವಿಭಾಗ) ಅಂಕ ಪಡೆದಿದ್ದಾನೆ. ಶಲ್ಯಕುಮಾರ್ 530, ಕೆ. ಇಹಾಸ್ 548 ಅಂಕ ಪಡೆದಿದ್ದಾರೆ.

ವಿಜಯ ವಿಠಲ ಕಾಲೇಜು: ಪರೀಕ್ಷೆಗೆ ಹಾಜರಾದ 255 ವಿದ್ಯಾರ್ಥಿಗಳಲ್ಲಿ 252 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. 113 ಉನ್ನತ ದರ್ಜೆ, 123 ಪ್ರಥಮ ದರ್ಜೆ, 13 ವಿದ್ಯಾರ್ಥಿ ಗಳು ದ್ವಿತೀಯ ಹಾಗೂ 3 ವಿದ್ಯಾರ್ಥಿ ಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ. ಎಸ್.ಯದುನಂದನ್ 588, ಅನೂಪ್ ಎಸ್.ರಾವ್ 585, ಹರ್ಷಿತ ಎಚ್.ಉಡುಪ್ 584, ಎಚ್.ಸ್ನೇಹಾ 583, ಆರ್.ಶ್ರೀನಿಧಿ 582 ಅಂಕ ಗಳಿಸಿದ್ದಾರೆ.

ಜೆಎಸ್‌ಎಸ್ (ಜೆ.ಪಿ.ನಗರ): ಕಲಾ ವಿಭಾಗದಲ್ಲಿ ಶೇ 94, ವಾಣಿಜ್ಯ ವಿಭಾಗದಲ್ಲಿ ಶೇ 83, ವಿಜ್ಞಾನ ವಿಭಾಗದಲ್ಲಿ ಶೇ 77 ಫಲಿತಾಂಶ ಲಭ್ಯ ವಾಗಿದೆ. ಜಿ.ಪಿ. ದಿವ್ಯ 529 (ವಿಜ್ಞಾನ ವಿಭಾಗ), ಸುಮಶ್ರೀ 527, ಆರ್. ಶಶಿಕಲಾ 510 (ವಾಣಿಜ್ಯ ವಿಭಾಗ), ಕಿರಣ್ 510 ಅಂಕ ಪಡೆದಿದ್ದಾರೆ.

ರಾಮಕೃಷ್ಣ ವಿದ್ಯಾಶಾಲಾ: ಕಾಲೇಜಿಗೆ ಶೇ 100 ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಹಾಜರಾದ 56 ವಿದ್ಯಾರ್ಥಿಗಳಲ್ಲಿ 32 ಉನ್ನತದರ್ಜೆ, 24 ವಿದ್ಯಾರ್ಥಿಗಳು ಪ್ರಥಮದ ರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎನ್.ಅಭಿಲಾಷ್ 574 ಅಂಕ (ಶೇ 95.66) ಪಡೆದಿದ್ದಾನೆ.

ನಟರಾಜ ಮಹಿಳಾ ಕಾಲೇಜು: ಪರೀಕ್ಷೆ ಬರೆದ 197 ವಿದ್ಯಾರ್ಥಿನಿಯರ ಪೈಕಿ 147 ಮಂದಿ ತೇರ್ಗಡೆ ಹೊಂದಿದ್ದಾರೆ. ವಿ.ಉಷಾ 537, ಸಿ.ಆರ್.ಜೆರಾಲ್ಡಿನ್ 533, ಪಲ್ಲವಿ 526, ಎಂ.ಪ್ರೀತಿ 521, ಡಿ.ಎನ್.ಸೌಜನ್ಯ 509, ಜಿ.ಪವಿತ್ರ 506,ಜೆ.ಪವಿತ್ರ 505,ಬಿ.ರೇಖಾ 501,ಸುಕನ್ಯ 500ಅಂಕ ಪಡೆದಿದ್ದಾರೆ.

ಕೆ.ಪುಟ್ಟಸ್ವಾಮಿ ಕಾಲೇಜು: ಕಾಲೇಜಿಗೆ ಶೇ 92 ಫಲಿತಾಂಶ ಬಂದಿದ್ದು, 10 ವಿದ್ಯಾರ್ಥಿಗಳು ಉನ್ನತದರ್ಜೆ, 43 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸದ್ವಿದ್ಯಾ ಕಾಲೇಜಿನ ಆರ್.ಅದಿತಿ ವಾಣಿಜ್ಯ ವಿಭಾಗದಲ್ಲಿ 559 ಅಂಕ (ಶೇ 93.16), ವಿಜ್ಞಾನ ವಿಭಾಗದಲ್ಲಿ ವೈಶಾಖ ವಿ.ಕುಮಾರ್ 569 (ಶೇ 94.83) ಅಂಕ ಪಡೆದಿದ್ದಾರೆ.

ಕೌಟಿಲ್ಯ ವಿದ್ಯಾಲಯ: ಕಾಲೇಜಿಗೆ ಶೇ 84 ಫಲಿತಾಂಶ ಬಂದಿದೆ. ಶೇ 14ರಷ್ಟು ವಿದ್ಯಾರ್ಥಿಗಳು ಅತ್ಯುನ್ನತದರ್ಜೆ, ಶೇ 40 ಪ್ರಥಮದರ್ಜೆ ಹಾಗೂ ಶೇ 30ರಷ್ಟು ದ್ವಿತೀಯ ದರ್ಜೆ ಪಡೆದಿ ದ್ದಾರೆ. ಎನ್.ಆದಿತ್ಯ 581, ಎಂ.ನಿಖಿಲ್ 520 (ವಿಜ್ಞಾನ ವಿಭಾಗ), ಬಿ.ಜಿ.ಸಿಂಚನಾ 576, ದೀಪಕ್ ಸಿರ್ವಿ 528, ಬಿ.ಚೈತ್ರ 525, ಕೆ.ಪೂಜಾ 520 (ವಾಣಿಜ್ಯ ವಿಭಾಗ) ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT