ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿವಿ, ಐಎಸ್‌ಇಸಿ ಒಡಂಬಡಿಕೆ

Last Updated 25 ಜನವರಿ 2012, 5:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯ ಮತ್ತು ಬೆಂಗಳೂರಿನ ಸಾಮಾ ಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ)ಗಳು ಶೈಕ್ಷಣಿಕ, ಸಂಶೋ ಧನಾ ಕಾರ್ಯಕ್ರಮಗಳು, ಸಹಯೋ ಗಳಿಗಾಗಿ ಮಂಗಳವಾರ ಒಡಂಬಡಿಕೆ ಮಾಡಿಕೊಂಡವು.

ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್‌ನಲ್ಲಿರುವ ಹಳೆಯ ಸಿಂಡಿಕೇಟ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ವಿ.ಜಿ. ತಳವಾರ್ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಆರ್.ಎಸ್. ದೇಶಪಾಂಡೆ ಒಪ್ಪಂದದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಇದರಿಂದಾಗಿ ಅಂತರರಾಷ್ಟ್ರೀಯ ಶೈಕ್ಷಣಿಕ ಮತ್ತು ಸಂಶೋ ಧನಾ ಸಹಕಾರ ಕ್ಷೇತ್ರಗಳಲ್ಲಿ ಹೊಸ ಯುಗಕ್ಕೆ ಈ ಒಡಂಬಡಿಕೆ ನಾಂದಿ ಹಾಡಿತು.

ಇವೆರಡೂ ಸಂಸ್ಥೆಗಳು ಸಹಕಾರದ ಮೌಲ್ಯ ಮತ್ತು ಮಹತ್ವಗಳನ್ನು ಗುರುತಿಸಿಕೊಂದ್ದು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಪರಸ್ಪರ ತಮ್ಮ ಏಕರೂಪವಾದ ಆಸಕ್ತಿಯನ್ನು ಬೆಳೆಸಿಕೊಳ್ಳಲು ಒಪ್ಪಗೆ ಸೂಚಿಸಿ ಮುಂದೆ ಬಂದಿವೆ.

ಪರಸ್ಪರ ಸಮಾನತೆ ಮತ್ತು ಸಂಶೋಧನೆಯ ಲಾಭಗಳನ್ನು ಒಬ್ಬರು ಇನ್ನೊಬ್ಬರ ಜೊತೆಯಲ್ಲಿ ಹಂಚಿಕೊಳ್ಳುವುದು, ಎರಡೂ ಸಂಸ್ಥೆಗಳ ಸಂಬಂಧಗಳನ್ನು ಬಲಪಡಿಸುವುದು ಹಾಗೂ ಎರಡೂ ಸಂಸ್ಥೆಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ವಿನಿಮಯ ಮಾಡಿ ಕೊಳ್ಳುವುದು-ಈ ತತ್ವಗಳನ್ನು ಆಧರಿಸಿ ಶೈಕ್ಷಣಿಕ ವಿನಿಮಯವನ್ನು ಸಾಧಿಸುವ ಉದ್ದೇಶದಿಂದ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ನಿರ್ದೇಶಕ ಆರ್.ಎಸ್.ದೇಶಪಾಂಡೆ ಮಾತನಾಡಿ `ಎರಡೂ ಸಂಸ್ಥೆಗಳು ಒಡಂಬಡಿಕೆಗೂ ಮುನ್ನ ಪರಸ್ಪರ ನಂಬಿಕೆ ಮೇಲೆ ಕೆಲಸ ಮಾಡುತ್ತಿದ್ದವು.

ಸಮಾಜ ವಿಜ್ಞಾನದ ವಿವಿಧ ಮುಖಗಳನ್ನು ಕುರಿತಂತೆ 175 ಕ್ಕಿಂತಲೂ ಹೆಚ್ಚು ಮಂದಿ ಸಂಶೋಧಕ ವಿದ್ವಾಂಸರು ನಮ್ಮ ಸಂಸ್ಥೆ ಮೂಲಕ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಈ ಪೈಕಿ ಹೆಚ್ಚು ಮಂದಿ ತಮ್ಮ ಪದವಿಗಳನ್ನು ಮೈಸೂರು ವಿವಿ ಮೂಲಕ ಪಡೆದಿದ್ದಾರೆ. ಸಂಶೋಧನೆ ಮತ್ತು ತರಬೇತಿಗೆ ಸಂಬಂಧಪಟ್ಟಂತೆ ನಮ್ಮ ಸಂಸ್ಥೆಯಲ್ಲಿ ಎಲ್ಲ ಬಗೆಯ ಆಧುನಿಕ ಸೌಲಭ್ಯಗಳು ದೊರೆಯುತ್ತವೆ~ ಎಂದು ಅವರು ಹೇಳಿದರು.

1972 ರಲ್ಲಿ ದಿವಂಗತ ಪ್ರೊ. ವಿ.ಕೆ.ಆರ್.ವಿ.ರಾವ್ ಸಂಸ್ಥಾಪಿಸಿದ ರಾಷ್ಟ್ರೀಯ ಮಟ್ಟದ ಅಂತರಶಿಸ್ತೀಯ ಸಮಾಜ ವಿಜ್ಞಾನಗಳ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆ ಕ್ಷೇತ್ರೋಪಯೋಗಿಯಾದ ಮತ್ತು ಜನೋಪಯೋಗಿಯಾದ ಮೂಲಭೂತ ಸಂಶೋಧನೆ ಮತ್ತು ಮುನ್ನಡೆಗಳನ್ನು ಸಮಾಜವಿಜ್ಞಾನ ಸೈದ್ಧಾಂತಿಕ ಕ್ಷೇತ್ರ ಗಳಲ್ಲಿ ಸಾಧಿಸುವ ನಿಟ್ಟಿನಲ್ಲಿ ಮುಂದು ವರಿದಿದ್ದು, ಇನ್ನೂ ಉತ್ತಮ ಸಾರ್ವ ಜನಿಕ ನೀತಿ ನಿರೂಪಣೆಗೆ ಜಾರಿ ಮಾಡಿ ಕೊಡುವ ಹಾದಿಯಲ್ಲಿ ಮುಂದುವರಿದಿದೆ ಎಂದರು.

ಒಪ್ಪಂದ ವೇಳೆ ಮೈಸೂರು ವಿವಿ ಕುಲಸಚಿವ ಪ್ರೊ.ಪಿ.ಎಸ್.ನಾಯಕ್, ಕುಲಸಚಿವ (ಪರೀಕ್ಷಾಂಗ) ಬಿ.ರಾಮು, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಕುಲಸಚಿವ ಕೆ.ಎಸ್. ನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT