ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದಿನಲ್ಲಿ ದೇವ್ ಪ್ರಸಾದ್ ರವರ ಕೃಷ್ಣ

Last Updated 20 ಡಿಸೆಂಬರ್ 2010, 11:40 IST
ಅಕ್ಷರ ಗಾತ್ರ
ADVERTISEMENT


ಬೆಂಗಳೂರಿನ ಎಂ.ಆರ್.ದೇವ್ ಪ್ರಸಾದ್ ವೃತ್ತಿಯಿಂದ ಎಂಜಿನಿಯರ್. ಪ್ರವಾಸ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ಇವರು ಪುರಾಣ ಪ್ರಸಂಗಗಳ ಅಧ್ಯಯನದಲ್ಲೂ ಕುತೂಹಲಿ. ಈ ಆಸಕ್ತಿಗಳ ಅಭಿವ್ಯಕ್ತಿ ‘ಕೃಷ್ಣ’ ಹೆಸರಿನ ಪುಸ್ತಕವಾಗಿ ಪ್ರಕಟಗೊಂಡಿದೆ. ಕೃಷ್ಣ ಜಾಗತಿಕ ಪ್ರಸಿದ್ಧನಾದುದರಿಂದಲೋ ಏನೋ, ಕನ್ನಡ ಬಲ್ಲ ದೇವ್ ಇಂಗ್ಲಿಷ್‌ನಲ್ಲೇ ಬರೆದಿದ್ದಾರೆ.

ಮಹಾಭಾರತದ ಕಾರಣಿಕ ಪುರುಷ ಕೃಷ್ಣನ ಕುರಿತಂತೆ ಅನೇಕ ಕಥೆಗಳಿವೆ. ಗೋವರ್ಧನ, ಮಥುರಾ, ವೃಂದಾವನ ಸೇರಿದಂತೆ ಅನೇಕ ಸ್ಥಳಗಳು ಕೃಷ್ಣನೊಂದಿಗೆ ತಳುಕು ಹಾಕಿಕೊಂಡಿವೆ. ಇಂಥ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ, ಅವುಗಳನ್ನು ಲೇಖಕರು ಪರಿಚಯಿಸಿದ್ದಾರೆ.
 
ಮಥುರಾ, ದ್ವಾರಕ, ಕುರುಕ್ಷೇತ್ರ, ಮಧುವನ, ಗೋಕುಲ, ಮಹಾವನ- ಹೀಗೆ ಅನೇಕ ಪುರಾಣ ಪ್ರಸಿದ್ಧ ಸ್ಥಳಗಳಿಗೆ ಸಂಬಂಧಿಸಿದ ವಿವರಗಳು ಇಲ್ಲಿವೆ. ಪ್ರವಾಸ ಕಥನ ಸ್ವರೂಪದ ಈ ಕೃತಿ, ಕೃಷ್ಣನಿಗೆ ಸಂಬಂಧಿಸಿದ ದಂತಕಥೆಗಳನ್ನೂ ಪ್ರಸ್ತಾಪಿಸುತ್ತದೆ. ಲೇಖಕರ ಅಧ್ಯಯನದ ಶಿಸ್ತಿಗೆ ಈ ಕೃತಿ ಉದಾಹರಣೆಯಂತಿದೆ. ಪೂರಕ ಚಿತ್ರಗಳು ಬರಹದ ಸೊಗಸನ್ನು ಹೆಚ್ಚಿಸಿದೆ. ಆಸ್ತಕರಿಗೆ ಇಷ್ಟವಾಗುವ ಈ ಕೃತಿ, ಪ್ರವಾಸಪ್ರಿಯರಿಗೂ ಉಪಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT