ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಬಾರಿ ಹಕ್ಕು ಚಲಾವಣೆ

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪೋರ್ಟ್‌ಬ್ಲೇರ್‌ (ಪಿಟಿಐ): ಶಿಲಾ­ಯುಗದ ಕೊನೆಯ ಬುಡಕಟ್ಟು ಜನಾಂಗ­ಗಳಲ್ಲಿ ಒಂದು ಎಂದು ಗುರು­-ತಿಸಲಾದ ಶೊಂಪೆನ್‌ ಸಮುದಾಯಕ್ಕೆ ಸೇರಿದವರು ದೇಶದ ಇತಿಹಾಸ­ದಲ್ಲೇ ಮೊದಲ ಬಾರಿಗೆ ಗುರುವಾರ ಮತ ಚಲಾಯಿಸಿದರು.

ಗ್ರೇಟ್‌ ನಿಕೋಬಾರ್‌ ದ್ವೀಪದ ನಿವಾಸಿ­­ಗಳಾದ ಶೊಂಪೆನ್‌ ಸಮು­ದಾಯ­ದವರು ಕೊಲ್ಲಿ ದ್ವೀಪ ಸಮೂಹದ ಜನಪ್ರತಿನಿಧಿ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಥಮ ಬಾರಿಗೆ ಪಾಲ್ಗೊಂಡರು.

‘ನಿಕೋಬಾರ್‌ ಜೈವಿಕ­ಮಂಡಲದ ರಕ್ಷಿತಾ­ರಣ್ಯದಲ್ಲಿ ಸ್ಥಾಪಿಸ­ಲಾದ ವಿಶೇಷ ಮತ­ಗಟ್ಟೆಯಲ್ಲಿ ಸುಮಾರು 60 ಮಂದಿ ಮತದಾನ ಮಾಡಿ­ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅರಣ್ಯದಲ್ಲಿ ನೆಲೆಸಿರುವ ಆರು ಬುಡಕಟ್ಟು ಸಮುದಾಯಗಲ್ಲಿ ಶೊಂಪೆನ್‌ ಜನಾಂಗ ಕೂಡ ಒಂದು. 2011ರ ಜನಗಣತಿ ಪ್ರಕಾರ ಇವರ ಸಂಖ್ಯೆ ಕೇವಲ 229.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT