ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ವಿಶ್ವಕಪ್‌ನಲ್ಲಿ ಕೇವಲ 15 ಪಂದ್ಯಗಳು!

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೋಟ್ಯಂತರ ಜನರ ಹೃದಯ ಸಿಂಹಾಸನ ಅಲಂಕರಿಸಿರುವ ಕ್ರಿಕೆಟ್ ಆಟದ ಜನಪ್ರಿಯತೆ ಏರಿದ ರೀತಿ ತಿಳಿಯಬೇಕಾದರೆ, ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಪಂದ್ಯಗಳ ಸಂಖ್ಯೆಗಳು ಮತ್ತು ಅವಧಿಯನ್ನು ನೋಡಬೇಕು. 1975ರಲ್ಲಿ  ಮೊಟ್ಟಮೊದಲ ವಿಶ್ವಕಪ್ ಟೂರ್ನಿಯಲ್ಲಿ ನಡೆದದ್ದು ಕೇವಲ 15 ದಿನ ಮಾತ್ರ. ಆದರೆ, ಇದೇ ತಿಂಗಳ 19ಕ್ಕೆ ಆರಂಭವಾಗುವ ಐಸಿಸಿ ವಿಶ್ವಕಪ್-2011 ಕ್ರಿಕೆಟ್ ಟೂರ್ನಿ ಮುಗಿಯುವುದು ಏಪ್ರಿಲ್ 2ರಂದು. ಅಂದರೆ ಭರ್ತಿ 42 ದಿವಸ!

ವೆಸ್ಟ್ ಇಂಡೀಸ್ ದೈತ್ಯರು ಪ್ರಾಬಲ್ಯ ಮೆರೆದ 1975 ಮತ್ತು 1979ರ ವಿಶ್ವಕಪ್ ಟೂರ್ನಿಗಳು ತಲಾ 15 ಪಂದ್ಯಗಳನ್ನು ಆಯೋಜಿಸಿದ್ದವು. ಆಗಿನ್ನೂ ಬಿಳಿಬಣ್ಣದ ಸಮವಸ್ತ್ರ ಚಾಲ್ತಿಯಲ್ಲಿತ್ತು. ಟಿವಿ ಮಾಧ್ಯಮ ಇನ್ನೂ ಇರಲಿಲ್ಲ. ಕಿವಿಗಂಟಿದ ರೇಡಿಯೊ ಕಾಮೆಂಟ್ರಿ ಮತ್ತು ಮರುದಿನ ಬೆಳಿಗ್ಗೆ ಬರುತ್ತಿದ್ದ ಪತ್ರಿಕೆಗಳಿಂದಲೇ ಕ್ರಿಕೆಟ್ ವಿಶ್ವಕಪ್‌ನ ವಿವರಗಳು ತಿಳಿಯುತ್ತಿದ್ದವು. ಈ ಎರಡೂ ಟೂರ್ನಿಗಳ ಮೊದಲ ಪಂದ್ಯ ಭಾರತದ್ದೇ ಆಗಿದ್ದು ವಿಶೇಷ. ಆದರೆ ಈ ಎರಡೂ ಟೂರ್ನಿಗಳಲ್ಲಿ ಸೆಮಿಫೈನಲ್ ತಲುಪಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ. ಲೀಗ್ ಪಂದ್ಯಗಳ ಪಾಯಿಂಟ್ಸ್ ಆಧಾರದ ಮೇಲೆ ಸೆಮಿಫೈನಲ್ ಪಂದ್ಯಗಳು ನಡೆಯುತ್ತಿದ್ದವು. ಇಂಗ್ಲೆಂಡ್‌ನಲ್ಲಿ ನಡೆದ 1983ರ ವಿಶ್ವಕಪ್ ಟೂರ್ನಿ 16 ದಿನಗಳ ಕಾಲ ನಡೆಯಿತು. ಇದರಲ್ಲಿ ನಡೆದದ್ದು 27 ಪಂದ್ಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT