ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊನಿಕಾ ಲೆವಿನ್‌ಸ್ಕಿ ಲೈಂಗಿಕ ಹಗರಣ:ಜಾಬ್ಸ್‌ಗೆ ಫೋನಾಯಿಸಿದ್ದ ಕ್ಲಿಂಟನ್!

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಮೋನಿಕಾ ಲೆವಿನ್‌ಸ್ಕಿ ಹಗರಣದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದಾಗ ಕಂಪ್ಯೂಟರ್ ಜಗತ್ತಿನ ದಿಗ್ಗಜ ದಿವಂಗತ ಸ್ಟೀವ್ ಜಾಬ್ಸ್ ಅವರಿಗೆ ಫೋನಾಯಿಸಿ, ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಎಂದು ಕೇಳಿದ್ದರಂತೆ.

ಇದಕ್ಕೆ ಉತ್ತರಿಸಿದ್ದ ಜಾಬ್ಸ್, `ನೀವು ಇಂತಹ ಕೆಲಸ ಮಾಡಿದ್ದೀರಿ ಎಂದು ನನಗನ್ನಸುತ್ತಿಲ್ಲ. ಹಾಗೊಂದು ವೇಳೆ ಮಾಡಿದ್ದೇ ಆದರೆ ಅದನ್ನು ದೇಶದ ಜನರೆದುರು ಸ್ಪಷ್ಟವಾಗಿ ತಿಳಿಸಿಬಿಡಿ~ ಎಂಬ ಸಲಹೆ ನೀಡಿದ್ದರಂತೆ!
ಆಗ ಅತ್ತ ಕಡೆಯಿಂದ ನೀರವ ಮೌನವೇ ಇದಕ್ಕೆ ಉತ್ತರವಾಗಿತ್ತಂತೆ!!

ಜಾಬ್ಸ್ ತಮ್ಮ 13ನೇ ವಯಸ್ಸಿಗೇ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದ್ದರಂತೆ. ಅವರಿಗೆ ದೇವರು ಇದ್ದಾನೊ ಇಲ್ಲವೊ ಎಂಬುದು ಒಂದು ರೀತಿ 50-50 ಛಾನ್ಸ್ ಎಂಬಂತಹ ಧೋರಣೆಯಾಗಿತ್ತಂತೆ. ಜಾಬ್ಸ್ ತಮ್ಮ 15ನೇ ವಯಸ್ಸಿನಲ್ಲೇ ಮಾದಕ ವಸ್ತು ಮರಿಜುವಾನದ ರುಚಿ ನೋಡಿದ್ದರಂತೆ!

ಇಂತಹ ಹತ್ತು ಹಲವು ಸ್ವಾರಸ್ಯಕರ ಅಂಶಗಳನ್ನು ಒಳಗೊಂಡ ಸ್ಟೀವ್ ಜಾಬ್ಸ್ ಅವರ ಜೀವನ ಚರಿತ್ರೆ ಇದೇ ಅಕ್ಟೋಬರ್ 24ರಂದು ಬಿಡುಗಡೆಯಾಗುತ್ತಿದೆ. ವಾಲ್ಟರ್ ಇಸಾಕ್‌ಸನ್ ಬರೆದಿರುವ ಈ ಜೀವನ ಚರಿತ್ರೆಯಲ್ಲಿ ಜಾಬ್ಸ್ ಅವರೊಂದಿಗೆ ನಡೆಸಲಾಗಿರುವ ಸುಮಾರು 40 ಹೆಚ್ಚು ಸಂದರ್ಶನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT