ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಅಂತರ್ಜಾಲ ಬಳಕೆ ಹೆಚ್ಚಳ ನಿರೀಕ್ಷೆ

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದಲ್ಲಿ ಮೊಬೈಲ್‌ ಅಂತರ್ಜಾಲ ಬಳಕೆದಾರರ ಸಂಖ್ಯೆ ಮುಂಬರುವ ಮಾರ್ಚ್‌ ವೇಳೆಗೆ 15.5 ಕೋಟಿಗೆ ತಲುಪುವ ನಿರೀಕ್ಷೆ ಯಿದೆ.

ದೇಶದಲ್ಲಿ ಮೊಬೈಲ್‌  ಫೋನ್‌ನಲ್ಲಿ  ಅಂತರ್ಜಾಲ  ಬಳಕೆ ಕುರಿತು  ಇತ್ತೀಚೆಗೆ  ‘ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಸೇವಾ ಸಂಸ್ಥೆ’(ಐಎಎಂಎಐ) ಮತ್ತು  ‘ಭಾರತೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ’ (ಐಎಂಆರ್‌ಬಿ) ಮಾರುಕಟ್ಟೆ ಅಧ್ಯಯನ ನಡೆಸಿದ್ದು, ‘ಈ ಸಂಖ್ಯೆ ಜೂನ್‌ ವೇಳೆಗೆ 18.5 ಕೋಟಿಗೆ ಮುಟ್ಟುವ ಸಾಧ್ಯತೆ ಇದೆ’ ಎಂದು ಹೇಳಿವೆ.

‘2013ರ ಅಕ್ಟೋಬರ್‌ನಲ್ಲಿ 11 ಕೋಟಿಯಷ್ಟಿದ್ದ ಮೊಬೈಲ್‌  ಫೋನ್‌ ಅಂತರ್ಜಾಲ ಬಳಕೆದಾರರ ಸಂಖ್ಯೆ ಡಿಸೆಂಬರ್‌ ವೇಳೆಗೆ 13 ಕೋಟಿ ತಲು ಪಿತ್ತು. 2014ರಲ್ಲಿ ಈ ಸಂಖ್ಯೆ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಶೇ 20ರಷ್ಟು ಹೆಚ್ಚುತ್ತಾ ಹೋಗುವ ನಿರೀಕ್ಷೆ ಇದೆ’ ಎಂದು ಐಎಎಂಎಐ ಮತ್ತು ಐಎಂ ಆರ್‌ಬಿ ವಿಶ್ವಾಸ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT