ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಟವರ್ ತೆರವು: ರಸ್ತೆತಡೆ

Last Updated 17 ಡಿಸೆಂಬರ್ 2012, 6:27 IST
ಅಕ್ಷರ ಗಾತ್ರ

ಗದಗ: ಮೊಬೈಲ್ ಟವರ್ ತೆರವುಗೊಳಿಸುವಂತೆ ಆಗ್ರಹಿಸಿ ನಗರದ ಹೆಲ್ತ್‌ಕ್ಯಾಂಪ್ ನಿವಾಸಿಗಳು ಭಾನು ವಾರ ರಸ್ತೆತಡೆ ನಡೆಸಿದರು. ಮೊಬೈಲ್ ಟವರ್‌ನಿಂದ ಹೊರ ಬರುವ ತರಂಗಾಂತರಗಳಿಂದ ನಿವಾಸಿ ಗಳಲ್ಲಿ ಹಲವು ಕಾಯಿಲೆಗಳು ಕಾಣಿಸಿ ಕೊಂಡಿವೆ.

ಜ್ವರ, ತಲೆನೋವು, ಚರ್ಮ ರೋಗದಿಂದ ನರಳುತ್ತಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ  ಮುನ್ನ ಮೊಬೈಲ್ ಟವರ್ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.ಅನುಮತಿ ಇಲ್ಲದೆ ಪಾಲಾ ಬದಾಮಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸುತ್ತಿದ್ದ ನಿವಾಸಿಗಳು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬಲವಂತವಾಗಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದರು.

`ನೂತನ ನಿಯಮದಂತೆ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಟವರ್‌ಗಳನ್ನು ಹಾಕುವಂತಿಲ್ಲ. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತದೆ. ನಿಯಮ ಉಲ್ಲಂಘಿಸಿ ಟವರ್ ಅಳವಡಿಸಲಾಗಿದೆ' ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT