ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಟವರ್ಸ್ ಸಂಖ್ಯೆ 4.20 ಲಕ್ಷಕ್ಕೆ!

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಎರಡನೇ ತಲೆಮಾರಿನ(2ಜಿ) ತರಂಗಾಂತರ ಅಳವಡಿಸಿಕೊಂಡಿರುವ ದೂರಸಂಪರ್ಕ ಮೂಲ ಕೇಂದ್ರಗಳು (ಬೇಸ್ ಸ್ಟೇಷನ್ಸ್)  ಈವರೆಗೆ ದೇಶದ ವಿವಿಧೆಡೆ ಒಟ್ಟು 3.76 ಲಕ್ಷ ಸಿಂಗ್ನಲ್ ಟವರ್‌ಗಳನ್ನು ನಿರ್ಮಿಸಿವೆ. 2017ರ ವೇಳೆಗೆ ಇದು 4.20 ಲಕ್ಷಕ್ಕೆ ಹೆಚ್ಚುವ ನಿರೀಕ್ಷೆ ಇದೆ ಎನ್ನುತ್ತದೆ ಇತ್ತೀಚಿನ ಅಧ್ಯಯನ ವರದಿ.

ಸಿಗ್ನಲ್ ಟವರ್‌ಗಳ ಸಂಖ್ಯೆ ಹೆಚ್ಚಲು ತರಂಗಾಂತರ ಸಾಮರ್ಥ್ಯ `3ಜಿ' ಮತ್ತು `4ಜಿ'ಗೆ ಬದಲಾಗಲಿರುವುದೇ ಕಾರಣ ಎನ್ನುತ್ತದೆ `ಅನಾಲಿಸಿಸ್ ಮೇಸನ್' ಎಂಬ ಸಂಸ್ಥೆ ನಡೆಸಿದ ಅಧ್ಯಯನ ವರದಿ.ನಗರ ಪ್ರದೇಶದಲ್ಲಿಯೇ ಸಿಗ್ನಲ್ ಕವರೇಜ್ ಸಾಮರ್ಥ್ಯ (ಮೊಬೈಲ್ ಸಂಕೇತಗಳ ಲಭ್ಯತೆ) ವಿಸ್ತರಣೆ ಕೆಲಸವೂ ಹೆಚ್ಚಲಿರುವುದರಿಂದ ಹೊಸದಾಗಿ 44000 ಟವರ್‌ಗಳು ನಿರ್ಮಾಣವಾಗಲಿವೆ. ಇದೇ ವೇಳೆ, `3ಜಿ' ತರಂಗಾಂತರ ಸೌಲಭ್ಯವುಳ್ಳು ಮೊಬೈಲ್ ಫೋನ್ ಗ್ರಾಹಕರ ಸಂಖ್ಯೆಯೂ ಮುಂದಿನ ಐದು ವರ್ಷಗಳಲ್ಲಿ 41.20 ಕೋಟಿಗೆ ಹೆಚ್ಚಲಿದೆ ಎಂದಿದೆ ಈ ವರದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT