ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಮಾತು: ಆಂಡ್ರಾಯ್ಡ ಜನಪ್ರಿಯತೆ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶಗಳಲ್ಲಿ ಗೂಗಲ್ ಆಂಡ್ರಾಯ್ಡ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿ ಆಯ್ಕೆಯಾಗಿದೆ. ಅಮೆರಿಕದಲ್ಲಿ ಹೆಚ್ಚಿನವರು ಆಂಡ್ರಾಯ್ಡ ಇರುವ ಸ್ಮಾರ್ಟ್‌ಫೋನ್ ಬಳಸುತಿದ್ದಾರೆ ಎಂದು ನೆಲ್ಸನ್ ಸಮೀಕ್ಷಾ ವರದಿ ತಿಳಿಸಿದೆ. ಕಳೆದ ತೈಮಾಸಿಕ ಅವಧಿಯಲ್ಲಿ  ನೋಕಿಯಾ ಮಾರುಕಟ್ಟೆ ಪಾಲು ಅಮೆರಿಕದಲ್ಲಿ ಶೇ 15ರಷ್ಟು ಕುಸಿತ ಕಂಡಿದೆ.

ನೆಲ್ಸನ್ ಸಮೀಕ್ಷಾ ತಂಡ ಸುಮಾರು 65 ಸಾವಿರ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸಂದರ್ಶಿಸಿದೆ. ಇವರಲ್ಲಿ ಶೇ 30ರಷ್ಟು ಜನ ತಾವು ಆಂಡ್ರಾಯ್ಡ ತಂತ್ರಾಂಶ ಇರುವ ಫೋನ್ ಬಳಸುತ್ತಿರುವುದಾಗಿ ಹೇಳಿದ್ದಾರೆ. ಆ್ಯಪಲ್ ಐಫೋನ್ ಬಳಕೆದಾರ ಸಂಖ್ಯೆ ಶೇ 26ರಷ್ಟಿದ್ದರೆ, ಬ್ಲ್ಯಾಕ್ ಬೆರಿ ಗ್ರಾಹಕರ ಸಂಖ್ಯೆ ಶೇ 23ರಷ್ಟಿದೆ ಎಂದೂ ಸಮೀಕ್ಷೆ ಹೇಳಿದೆ.

ಆ್ಯಪಲ್ ಐಫೋನ್‌ಗಿಂತಲೂ ಆಂಡ್ರಾಯ್ಡ ಬಳಕೆದಾರರು ಹೆಚ್ಚು ದತ್ತಾಂಶವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆಂಡ್ರಾಯ್ಡ ಬಳಕೆದಾರರ ತಿಂಗಳ ಸರಾಸರಿ ದತ್ತಾಂಶ ಬಳಕೆ 582ಎಂ.ಬಿಗಳಷ್ಟಿದ್ದರೆ, ಐಫೋನ್ ಬಳಕೆದಾರರದ್ದು 492ಎಂ.ಬಿ. ಬ್ಲ್ಯಾಕ್‌ಬೆರಿ ಮಾರುಕಟ್ಟೆ ಕೂಡ ಈ ಅವಧಿಯಲ್ಲಿ ಶೇ 5ರಷ್ಟು ಕುಸಿತ ಕಂಡಿದೆ.

2008ರಿಂದ `ರಿಮ್~ ಕಂಪೆನಿ ನ್ಯೂಯಾರ್ಕ್ ಷೇರುಪೇಟೆಯಲ್ಲಿ  ಶೇ 60ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಬ್ಲಾಕ್‌ಬೆರಿ ತನ್ನ ಟ್ಯಾಬ್ಲೆಟ್ ಮಾರುಕಟ್ಟೆ ವಿಸ್ತರಣೆಗಾಗಿ ಶೋಧ ತಾಣ `ಬಿಂಗ್~ ಜತೆ ಒಪ್ಪಂದ ಮಾಡಿಕೊಂಡಿದೆ. ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳಲ್ಲಿ `ಬಿಂಗ್~ ಡಿಪಾಲ್ಟ್ ಸರ್ಚ್ ಎಂಜಿನ್ ಆಗಿ ಕಾರ್ಯ ನಿರ್ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT