ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಮಾರುಕಟ್ಟೆಗೆ ಡೆಲ್ ಪ್ರವೇಶ

Last Updated 3 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ


ಬೆಂಗಳೂರು: ಕಂಪ್ಯೂಟರ್ ತಯಾರಿಕೆಯ ವಿಶ್ವದ 2ನೇ ಅತಿದೊಡ್ಡ ಸಂಸ್ಥೆಯಾಗಿರುವ ಡೆಲ್, ಈಗ ಮೊಬೈಲ್ ತಯಾರಿಕಾ ರಂಗಕ್ಕೂ ಕಾಲಿರಿಸಿದ್ದು, ಗುರುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಎರಡು ಹೊಸ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.

ವೃತ್ತಿನಿರತರು, ಯುವ ಜನತೆ ಮತ್ತು ವಿದ್ಯಾರ್ಥಿಗಳ ಮನರಂಜನೆ ಮತ್ತು ಸಾಮಾಜಿಕ ಸಂಪರ್ಕ ತಾಣಗಳ ಅಗತ್ಯಗಳನ್ನೆಲ್ಲ   ಒದಗಿಸುವ  ನಿಟ್ಟಿನಲ್ಲಿ ‘ಆಂಡ್ರಾಯ್ಡಾ’ ಮತ್ತು ‘ವಿಂಡೋಸ್ 7’  ಮೊಬೈಲ್ ಕಾರ್ಯನಿರ್ವಹಣಾ ಸೌಲಭ್ಯ ಒಳಗೊಂಡಿರುವ ‘ವೆನ್ಯು’ ಮತ್ತು ‘ವೆನ್ಯು ಪ್ರೊ’ ಹೆಸರಿನ ಎರಡು ವಿಶಿಷ್ಟ ವಿನ್ಯಾಸದ ಜಿಎಸ್‌ಎಂ ತಂತ್ರಜ್ಞಾನದ ಮೊಬೈಲ್‌ಗಳನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಮೊಬೈಲ್ ಸೇವಾ ಸಂಸ್ಥೆ ಏರ್‌ಸೆಲ್ ಸಹಭಾಗಿತ್ವದಲ್ಲಿ ಮೊಬೈಲ್ ಗ್ರಾಹಕರಿಗೆ ವಿಶಿಷ್ಟ ಬಗೆಯ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲಾಗುವುದು ಎಂದು ಡೆಲ್ ಇಂಡಿಯಾದ  ಗ್ರಾಹಕ ಉತ್ಪನ್ನಗಳ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಭಲ್ಲಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.   ‘ಡೆಲ್ ವೆನ್ಯು’ - ಆರಂಭಿಕ ಬೆಲೆ ರೂ 29,990 ಮತ್ತು  ‘ಡೆಲ್ ವೆನ್ಯು ಪ್ರೊ’ದ ಬೆಲೆ  ರೂ 34,990 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT