ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಸಂಪರ್ಕಕ್ಕೆ ಆಧಾರ್ ನೆರವು

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್ ಸಂಪರ್ಕ ಪಡೆಯಲು ಇನ್ನು ಮುಂದೆ  ಭಾವಚಿತ್ರ ನೀಡುವ ಅಥವಾ ಮಾರುದ್ದದ ಅರ್ಜಿ  ಭರ್ತಿ ಮಾಡುವ ಸಾಹಸ ಮಾಡಬೇಕಿಲ್ಲ. ಬಯೋಮೆಟ್ರಿಕ್ ಯಂತ್ರದ ಮೇಲೆ  ಕೈ ಬೆರಳುಗಳನ್ನಿಟ್ಟ ಮರುಕ್ಷಣ `ಸಿಮ್~ ಕಾರ್ಡ್ ಕೈಯಲ್ಲಿರುತ್ತದೆ.

ಹೌದು! ಇದು ಆಶ್ಚರ್ಯವಾದರೂ ಸತ್ಯ. ವೊಡಾಫೋನ್ ಸಂಸ್ಥೆ, `ಆಧಾರ್~ ಗುರುತಿನ ಚೀಟಿಗಾಗಿ ನಾಗರಿಕರು ನೀಡಿರುವ ಸಮಗ್ರ ಮಾಹಿತಿಯನ್ನು `ನಿಮ್ಮ ಗ್ರಾಹಕರನ್ನು ತಿಳಿಯಿರಿ~ (ಕೆವೈಸಿ) ವ್ಯವಸ್ಥೆಗೆ ಅಳವಡಿಸಿದೆ. 

ಆಂಧ್ರಪ್ರದೇಶದ ತನ್ನ ಎರಡು ಮಳಿಗೆಗಳಲ್ಲಿ `ಸಿಮ್~ ವಿತರಿಸಲು ಈಗಾಗಲೇ ಈ ವ್ಯವಸ್ಥೆಯನ್ನು ವೊಡಾಫೋನ್ ಜಾರಿಗೆ ತಂದಿದೆ. ಮತ್ತೊಂದು ಮೊಬೈಲ್ ದೂರಸಂಪರ್ಕ ಸೇವಾ ಸಂಸ್ಥೆ ಏರ್‌ಟೆಲ್ ಕೂಡಾ ದೆಹಲಿಯಲ್ಲಿ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ.

ಮೊಬೈಲ್ ದೂರವಾಣಿ ಸಂಪರ್ಕ ಕಲ್ಪಿಸುವ `ಸಿಮ್~ ವಿತರಿಸಲು ಸರ್ಕಾರ ದೇಶದಾದ್ಯಂತ ನಾಗರಿಕರಿಗೆ ನೀಡಿರುವ ಆಧಾರ್ ಸಂಖ್ಯೆಯನ್ನು ಗುರುತಿನ ಪುರಾವೆಯನ್ನಾಗಿ ಪರಿಗಣಿಸಲು ವೊಡಾಫೋನ್ ಈಗಾಗಲೇ ನಿರ್ಧರಿಸಿದೆ. ಹೈದರಾಬಾದ್ ಮತ್ತು ವಿಜಯವಾಡದ ಮಳಿಗೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಭಾರತೀಯ ಏಕರೂಪ ಗುರುತಿನ ಸಂಖ್ಯೆ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಆರ್. ಎಸ್. ಶರ್ಮಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT