ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಸೆಕ್ಯೂರಿಟಿ-ಆ್ಯಂಟಿವೈರಸ್

ಅಕ್ಷರ ಗಾತ್ರ

ವೆಬ್‌ರೂಟ್ ಆ್ಯಂಟಿವೈರಸ್ ಮತ್ತು ಸೆಕ್ಯೂರಿಟಿ ಅ್ಯಪ್. ಈ ಅಪ್ಲಿಕೇಷನ್‌ಆಂಡ್ರಾಯಿಡ್ ಮೊಬೈಲ್ ಹಾಗೂ ಟ್ಯಾಬೆಟ್ಲ್‌ಗಳಿಗೆ ಅ್ಯಂಟಿವೈರಸ್ ಮತ್ತು ಸೆಕ್ಯೂರಿಟಿ ಆ್ಯಪ್ ಆಗಿ ಕೆಲಸ ಮಾಡುತ್ತದೆ. ಇದು ಉಚಿತವಾಗಿ ಅಂತರ್ಜಾಲದಲ್ಲಿ ಲಭ್ಯವಿದೆ.

ಈ ಆ್ಯಂಟಿವೈರಸ್ ಅಪ್ಲಿಕೇಷನ್, ಮೊಬೈಲ್ ಫೋನ್‌ನಲ್ಲಿನ ಫೈಲ್‌ಗಳು ಮತ್ತು ಇತರೆ ಅಪ್ಲಿಕೇಷನ್‌ಗಳನ್ನು ಸ್ವಯಂಚಾಲಿತವಾಗಿ(ಆಟೋಮ್ಯಾಟಿಕ್) ಸ್ಕ್ಯಾನ್ ಮಾಡುತ್ತಿರುತ್ತದೆ. ಮಾಲ್ವೇರ್‌ಗಳು ಮೊಬೈಲ್ ಫೋನ್ ಪ್ರವೇಶಿಸದಂತೆ ಬಾಕ್ಲ್ ಮಾಡುತ್ತದೆ.

ಫಿಷಿಂಗ್‌ನಿಂದಲೂ ಫೋನ್‌ಗಳನ್ನು ರಕ್ಷಿಸುತ್ತದೆ. ವೈರಸ್, ಸ್ಪೈವೇರ್, ಟ್ರೋಜಾನ್‌ಗಳಿಂದಲೂ ಧಕ್ಕೆಯಾಗದಂತೆ ರಕ್ಷಣೆ ಒದಗಿಸುತ್ತದೆ.

ಮೊಬೈಲ್ ಫೋನ್ ಕಳೆದುಹೋದಾಗ ದೂರದಿಂದಲೇ(ರಿಮೋಟ್ ಅಕ್ಸೆಸ್), ಇನ್ನೊಂದು ಸ್ಮಾರ್ಟ ಫೋನ್‌ನಿಂದ ಅಥವಾ ವೆಬ್‌ರೂಟ್ ವೆಬ್‌ಸೈಟ್‌ನಿಂದ ಕಳೆದ ಫೋನನ್ನು ಅದು ಕಾರ್ಯನಿರ್ವಹಿಸದಂತೆ ಲಾಕ್ ಮಾಡಬಹುದು. ಅದರಲ್ಲಿರುವ ಡೇಟಾಗಳನ್ನು ವೈಪ್ ಮಾಡಬಹುದು ಹಾಗೂ ಮೊಬೈಲ್ ಇರುವ ಪ್ರದೇಶವನ್ನು ತಿಳಿದುಕೊಳ್ಳಬಹುದು(ಲೊಕೇಟ್).

ನಿಮ್ಮ ಆಪ್ತರ, ಬಂಧು-ಮಿತ್ರರ ಅತ್ಯಗತ್ಯವಾದ ಟೆಲಿಫೋನ್ ಸಂಖ್ಯೆಗಳನ್ನು, ಬಹಳ ಮುಖ್ಯವಾದ ಅಥವಾ ನೀವು ರಹಸ್ಯವಾಗಿ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದ ಮಾಹಿತಿಗಳನ್ನೂ ದೂರದಿಂದಲೇ ಅಳಿಸಿಹಾಕಬಹುದು.

ಸಿಮ್ ಕಾರ್ಡ್ ಹೊರತೆಗೆದಾಗ ಈ  ಆ್ಯಪ್ ಸ್ವಯಂಚಾಲಿತವಾಗಿ ಮೊಬೈಲ್ ಫೋನನ್ನು ಲಾಕ್ ಮಾಡಿಬಿಡುತ್ತದೆ. ಅಂದರೆ, ಅಪರಿಚಿತರಿಗೆ ಮತ್ತೆ ಮೊಬೈಲ್ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅ್ಯಪ್ ಹೆಸರು: ವೆಬ್‌ರೂಟ್ ಆ್ಯಂಟಿವೈರಸ್ ಮತ್ತು ಸೆಕ್ಯೂರಿಟಿ ಆ್ಯಪ್ ರೇಟಿಂಗ್: 4.4, ಸೈಜ್: 3.5 ಎಂ.ಬಿ.

ಅ್ಯಂಡ್ರೊಯಿಡ್: 2.2 ಮತ್ತು ಮೇಲಿನ ದರ್ಜೆ ಫೋನ್‌ಗಳಿಗೆ ಸೂಕ್ತ
ಬೆಲೆ: ಉಚಿತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT