ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ಗೂ ವೈರಸ್ ಕಾಟ!

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಕ್ಯಾಸ್ಪ್ರಸ್ಕಿ ಲ್ಯಾಬ್‌ನವರು 2010ರಲ್ಲಿ ಮೊಬೈಲ್ ಕಡತಗಳನ್ನು ನಾಶಮಾಡುವ ಸಾಮರ್ಥ್ಯವಿರುವ `ಟ್ರೋಜನ್ ಎಸ್‌ಎಂಎಸ್. ಆಂಡ್ರಾಯ್ಡ ಒ.ಎಸ್~ ಎನ್ನುವ ಪ್ರೊಗ್ರಾಂ ಪತ್ತೆಹಚ್ಚಿದರು. ಇದೊಂದು ವರ್ಮ್. ಗೂಗಲ್ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈರಸ್ ಹೆಚ್ಚಾಗಿ ಕಂಡುಬಂದಿತ್ತು.

ಮೊದಲ ಮೊಬೈಲ್ ವೈರಸ್ ಪತ್ತೆಯಾಗಿದ್ದು 2004ರಲ್ಲಿ. `ಓಜಂ~ ಎಂಬ ಕಂಪೆನಿ ಅಭಿವೃದ್ಧಿಪಡಿಸಿದ `ಮಾಸ್ಕ್ಯುಟೊ~ ಎಂಬ ಮೊಬೈಲ್ ಗೇಮ್‌ನಲ್ಲಿ ಟ್ರೋಜನ್ ಗುಂಪಿಗೆ ಸೇರಿದ ಈ ವೈರಸ್ ಪತ್ತೆಯಾಗಿತ್ತು. ಇದೇ ವರ್ಷ ಜುಲೈನಲ್ಲಿ ಕೆಲವು ಗಣಕ ಹವ್ಯಾಸಿಗರು `ಕ್ಯಾಬಿರ್~ (cabir) ಎನ್ನುವ ಮೊಬೈಲ್ ವೈರಸ್ ಹುಟ್ಟಹಾಕಿದರು. ಇದು ಬ್ಲೂಟೂಥ್ ಮೂಲಕ ಹರಡುತ್ತಿತ್ತು. ವೈರಸ್ ಪೀಡಿತ ಹ್ಯಾಂಡ್‌ಸೆಟ್ ಸ್ವಿಚ್ ಆನ್‌ಮಾಡಿದಾಗ ಪ್ರತಿಬಾರಿ ಮೊಬೈಲ್ ಪರದೆಯ ಮೇಲೆ `Caribe~ ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತಿತ್ತು.

2005ರಲ್ಲಿ `ಕಾಂ ವಾರಿಯರ್-ಎ~ ಎನ್ನುವ ವರ್ಮ್ ಒಂದನ್ನು ಪತ್ತೆಹಚ್ಚಲಾಯಿತು. ಇದು `ಸಿಂಬಿಯನ್~ ಕಾರ್ಯನಿರ್ವಹಣಾ ತಂತ್ರಾಂಶವಿರುವ ಮೊಬೈಲ್‌ಗಳಲ್ಲಿ ಕಾಣಿಸಿಕೊಂಡಿತ್ತು. ಈ ವೈರಸ್ ಫೋನ್‌ನಲ್ಲಿರುವ ಮಲ್ಟಿಮೀಡಿಯಾ ಕಡತಗಳನ್ನು (ಎಂಎಂಎಸ್) ತಾನಾಗಿಯೇ ನಕಲು ಮಾಡಿ, ಫೋನ್‌ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುತ್ತಿದ್ದ (ser~s address book) ಎಲ್ಲರ ಹೆಸರಿಗೂ ಸಂದೇಶ ಕಳುಹಿಸುತ್ತಿತ್ತು.

ಆ ಸಂದೇಶ ತೆರೆದಾಗ ಮೂರನೆಯ ವ್ಯಕ್ತಿಯ ಹ್ಯಾಂಡ್‌ಸೆಟ್‌ಗೂ  ಈ ವೈರಸ್ ಸೇರಿಕೊಳ್ಳುತ್ತಿತ್ತು. `ಕಾಂ ವಾರಿಯರ್~ ಪತ್ತೆಯಾದ ಕಾಲವನ್ನು ಮೊಬೈಲ್ ಫೋನ್‌ಗಳ ಮೇಲೆ ನಡೆದ ಎಲೆಕ್ಟ್ರಾನಿಕ್ ದಾಳಿಯ ಆರಂಭದ ಶಕೆ ಎಂದು ಗುರುತಿಸಲಾಗಿದೆ. 

ಕ್ಯಾಸ್ಪ್ರಸ್ಕಿ ಲ್ಯಾಬ್‌ನವರು 2010ರಲ್ಲಿ ಮೊಬೈಲ್ ಕಡತಗಳನ್ನು ನಾಶಮಾಡುವ ಸಾಮರ್ಥ್ಯವಿರುವ `ಟ್ರೋಜನ್ ಎಸ್‌ಎಂಎಸ್. ಆಂಡ್ರಾಯ್ಡ ಒ.ಎಸ್~ ಎನ್ನುವ ಪ್ರೊಗ್ರಾಂ ಪತ್ತೆಹಚ್ಚಿದರು. ಇದೊಂದು ವರ್ಮ್. ಗೂಗಲ್ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈರಸ್ ಹೆಚ್ಚಾಗಿ ಕಂಡುಬಂದಿತ್ತು.

ಬಳಕೆದಾರನ ಗಮನಕ್ಕೇ ಬರದಂತೆ ವಿಳಾಸ ಪಟ್ಟಿಯಲ್ಲಿರುವ ಎಲ್ಲರ ಸಂಖ್ಯೆಗಳಿಗೂ ಈ ವೈರಸ್ `ಎಸ್‌ಎಂಎಸ್~ ಕಳುಹಿಸುತ್ತಿತ್ತು. ಆನ್‌ಲೈನ್ ಮೂಲಕ ಆಂಡ್ರಾಯ್ಡ ಅಪ್ಲಿಕೇಷನ್ಸ್ ಡೌನ್‌ಲೋಡ್‌ಮಾಡಿಕೊಳ್ಳುವಾಗಲೂ ಇದು ಹ್ಯಾಂಡ್‌ಸೆಟ್‌ನೊಳಗೆ ಸೇರಿಕೊಳ್ಳುತ್ತಿತ್ತು.

ಡಟ್ಸ್: (Duts) `ಕ್ಯಾಬಿರ್~ ನಂತರ ಹೆಚ್ಚು ಹಾನಿ ಮಾಡಿದ  ಮೊಬೈಲ್ ವೈರಸ್ `ಡಟ್ಸ್~.
ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಎಲೆಕ್ಟ್ರಾನಿಕ್ (PocketPC platform) ಉಪಕರಣಗಳಲ್ಲಿ ಕಾಣಿಸಿಕೊಂಡ ಈ ವೈರಸ್ ಎಲ್ಲ `ಎಕ್ಸ್‌ಇಇ~ (EXE) ಫೈಲ್‌ಗಳನ್ನು ಹಾನಿಗೊಳಿಸುತ್ತಿತ್ತು.

ಸ್ಕಲ್ಸ್ (Skulls): ಟ್ರೋಜನ್ ಹಾರ್ಸ್ ಗುಂಪಿಗೆ ಸೇರಿದ ವೈರಸ್ ಇದು. ಒಮ್ಮೆ ಈ ವೈರಸ್ ಡೌನ್‌ಲೋಡ್ ಆದರೆ, ಡೆಸ್ಕ್‌ಟಾಪ್ ಮೇಲಿರುವ ಎಲ್ಲ `ಐಕ್ಯಾನ್~ಗಳು  `ತಲೆಬುರುಡೆ~ ಚಿತ್ರಗಳಾಗಿ ಬದಲಾಗುತ್ತಿದ್ದವು. ಎಸ್‌ಎಂಎಸ್, ಎಂಎಂಎಸ್ ಹಾಗೂ ಇತರೆ ಎಲ್ಲ ರೀತಿಯ ಮೊಬೈಲ್ ಫೋನ್ ಅಪ್ಲಿಕೇಷನ್‌ಗಳನ್ನು ನಾಶಪಡಿಸುವ ಶಕ್ತಿ ಇದಕ್ಕಿತ್ತು. 

 ಬ್ಲೂಟೂಥ್ ಸಂಪರ್ಕ ಜಾಲದ ಮೂಲಕ ಹರಡಿ ಮೊಬೈಲ್ ಅಪ್ಲಿಕೇಷನ್ಸ್ ಹಾಳುಗಡೆವಬಲ್ಲ, ಇತ್ತೀಚೆಗೆ ಪತ್ತೆಯಾದ ವರ್ಮ್ ಎಂದರೆ  `ಮ್ಯಾಬಿರ್-ಎ~ (Mabir-A) ಮತ್ತು `ಫಾಂಟಲ್ ಎ~ (Fontal-A). ಫಿನ್‌ಲ್ಯಾಂಡ್ ಮೂಲದ `ಇ-ಫೋರ್ಸ್ ಎನ್ನುವ ಎಲೆಕ್ಟ್ರಾನಿಕ್ ಕಂಪೆನಿ ಇದನ್ನು ಪತ್ತೆಹಚ್ಚಿದೆ.

ಫೋನ್‌ನಲ್ಲಿರುವ ವಿಳಾಸಗಳನ್ನು ನಕಲು ಮಾಡುವ, ಸ್ವಯಂಚಾಲಿತವಾಗಿ `ಬ್ಲ್ಯಾಂಕ್~ (ಖಾಲಿ ಸಂದೇಶ) ಮಸೇಜ್ ಕಳುಹಿಸುವ ಕೀಟಲೆಯನ್ನು ಈ ವೈರಸ್ ಮಾಡುತ್ತದೆ. ಇನ್‌ಬಾಕ್ಸ್‌ಗೆ ಬರುವ ಇಂತಹ `ಖಾಲಿ ಸಂದೇಶ~ಗಳನ್ನು ತೆರೆದು ನೋಡಲೆತ್ನಿಸುತ್ತಿದ್ದಂತೆಯೇ ಈ ವೈರಸ್ ಹ್ಯಾಂಡ್‌ಸೆಟ್‌ನೊಳಗೆ ಅಂಟಿಕೊಳ್ಳತ್ತದೆ.

`ಫಾಂಟಲ್-ಎ~ ವೈರಸ್ ದಾಳಿಯಾದರೆ ಮೊಬೈಲ್‌ನಲ್ಲಿ ಹೊಸ ಅಪ್ಲಿಕೇಷನ್ ಅನುಸ್ಥಾಪನೆ(ಇನ್‌ಸ್ಟಾಲ್) ಮಾಡಲು ಸಾಧ್ಯವಾಗುವುದೇ ಇಲ್ಲ. ಈ ವೈರಸ್ ನಾಶಪಡಿಸಲು ಇರುವ ಏಕೈಕ ದಾರಿ ಮೊಬೈಲ್ `ರಿ-ಫಾರ್ಮೆಟ್~. ಹೀಗೆ ಮಾಡುವುದರಿಂದ ಫೋನ್‌ನಲ್ಲಿರುವ ಸಂಪೂರ್ಣ ದತ್ತಾಂಶ ನಾಶವಾಗುತ್ತದೆ. ಆದರೆ ಅದು ಅನಿವಾರ್ಯ.

`ಐಆರ್‌ಸಿ~ (Internet Relay Chat)  ಮತ್ತು `ಪಿ2ಪಿ~ (peer-to-peer) ಫೈಲ್ ಷೇರಿಂಗ್ ಮೂಲಕ ಇದು ಹೆಚ್ಚಾಗಿ ಹರಡುತ್ತದೆ.ಈವರೆಗೆ `ಎಂಎಂಎಸ್~ ಮೆಸೇಜ್ ಮೂಲಕ ಹರಡುವ 20ಕ್ಕೂ ಹೆಚ್ಚು ಮೊಬೈಲ್ ವೈರಸ್‌ಗಳನ್ನು ಪತ್ತೆಹಚ್ಚಲಾಗಿದೆ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT