ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಮ್ಮಗನಿಗೆ ಗಡ್ಡ ತೆಗೆ ಎಂದ ಎಲಿಜಬೆತ್‌

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): ಬ್ರಿಟನ್‌ ಯುವರಾಜ  ಹ್ಯಾರಿಯ ಹೊಸ ಗಡ್ಡದ ಶೈಲಿಯನ್ನು ಎಲ್ಲರೂ ಪ್ರಶಂಸಿ­ಸಿದರೆ, ಅವರ ಅಜ್ಜಿ ಬ್ರಿಟನ್‌ ರಾಣಿ ಎಲಿಜ­ಬೆತ್‌­ ಗಡ್ಡವನ್ನು ತೆಗೆಯುವಂತೆ ರಾಜಾಜ್ಞೆ ನೀಡಿದ್ದಾಳೆ.

ಮೊಮ್ಮಗ ಹ್ಯಾರಿಯ ಹೊಸ ಗಡ್ಡದ ಶೈಲಿಯಿಂದ ರಾಣಿ ಎಲಿಜಬೆತ್‌ಗೆ ಇರಿಸು­ಮುರಿಸು ಉಂಟಾಗಿದ್ದು, ಹೊಸ ವರ್ಷ­ದ ಆರಂಭದಲ್ಲಿಯೇ ಆದಷ್ಟು ಬೇಗ ಗಡ್ಡ­­ ಬೋಳಿಸಿಕೊಳ್ಳುವಂತೆ ಆದೇಶಿಸಿದ್ದಾರೆ.

ರಾಜಾಜ್ಞೆ ಪಾಲಿಸಲು ಹ್ಯಾರಿ ಒಪ್ಪಿ­ಕೊಂಡಿದ್ದು, ತನ್ನ ಗೆಳತಿ ಕ್ರೆಸಿಡಾ ಬೋನಸ್‌ ಗಡ್ಡವನ್ನು ನೋಡಿದ ಬಳಿಕ ಅದನ್ನು ತೆಗೆ­ಯು­ವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ಹ್ಯಾರಿಯ ಹೊಸ ಗಡ್ಡದ ಶೈಲಿಗೆ ಅಣ್ಣ ವಿಲಿ­ಯಮ್‌ ಹಾಗೂ ಅತ್ತಿಗೆ ಕೇಟ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT