ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರ್ಸಿ ಬೆಂಬಲಿಗರ ಪ್ರತಿಭಟನೆ ಹತ್ತಿಕ್ಕಲು ಸೂಚನೆ

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕೈರೊ (ಎಎಫ್‌ಪಿ): ಈಜಿಪ್ಟ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಐರೋಪ್ಯ ಸಮುದಾಯದ ನಿಯೋಗ ಇಲ್ಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪದಚ್ಯುತ ಅಧ್ಯಕ್ಷ ಮಹಮ್ಮದ್ ಮೊರ್ಸಿ ಬೆಂಬಲಿತ ಇಸ್ಲಾಮ್‌ವಾದಿಗಳನ್ನು ಹತ್ತಿಕ್ಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಂಗಾಮಿ ಸರ್ಕಾರದ ಸಂಪುಟ ಆದೇಶ ನೀಡಿದೆ.

ಕೈರೊದಲ್ಲಿ ಪ್ರತಿಭಟನಾನಿರತ ಮೊರ್ಸಿ ಬೆಂಬಲಿಗರನ್ನು ನಿಯಂತ್ರಿಸಲು ಸೇನೆ ನಡೆಸಿದ ಪ್ರತಿದಾಳಿಯಲ್ಲಿ 82 ಜನ ಮೃತಪಟ್ಟ ನಂತರ ಪರಿಸ್ಥಿತಿ ಬಿಗಡಾಯಿಸಿ ವಿಶ್ವದ ಹಲವು ರಾಷ್ಟ್ರಗಳು ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದವು.

ಸೇನೆಯ ಈ ಕೃತ್ಯ ಖಂಡಿಸಿ ಭಾರಿ ಸಂಖ್ಯೆಯಲ್ಲಿದ್ದ ಮೊರ್ಸಿ ಬೆಂಬಲಿಗರು ಪ್ರತಿಭಟನೆ ಕೈಗೊಂಡಿದ್ದರಿಂದ ಬಿಕ್ಕಟ್ಟು ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT