ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ವಂಜಾರಾ ಗರಂ

Last Updated 3 ಸೆಪ್ಟೆಂಬರ್ 2013, 20:00 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಒಂದು ಕಾಲದ ಪರಮಾಪ್ತ ಹಾಗೂ ನಕಲಿ ಎನ್‌ಕೌಂಟರ್‌ನಿಂದ ಕುಖ್ಯಾತಿಗೆ ಒಳಗಾಗಿದ್ದ  ಗುಜರಾತ್‌ನ ಮಾಜಿ ಡಿಐಜಿ ವಂಜಾರಾ ಮಂಗಳವಾರ ಹಠಾತ್ ರಾಜೀನಾಮೆ ನೀಡಿರುವುದಲ್ಲದೇ, ಮೋದಿ ಹಾಗೂ ಅಮಿತ್ ಷಾ ವಿರುದ್ಧವೇ ತಿರುಗಿ ಬೀಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದೇಶದ ಗಮನ ಸೆಳೆದಿದ್ದ ಸೊಹ್ರಾಬುದ್ದೀನ್ ಶೇಕ್, ತುಳಸಿರಾಮ್ ಪ್ರಜಾಪತಿ ಮತ್ತು ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವರು ಆರು ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಈ ಮೊದಲೇ ಸೇವೆಯಿಂದ ಅಮಾನತುಗೊಂಡಿದ್ದ ಅವರು ಮಂಗಳವಾರ ಏಕಾಏಕಿ ಸೇವೆಯಿಂದ ಬಿಡುಗಡೆ ಬೇಡಿ ರಾಜೀನಾಮೆ ಸಲ್ಲಿಸಿದರು.  ಹತ್ತು ಪುಟಗಳ ರಾಜೀನಾಮೆ ಪತ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

`ಮೋದಿ ಅವರನ್ನು ದೇವರಂತೆ ಆರಾಧಿಸುತ್ತಿದ್ದೆ. ಅವರಲ್ಲಿ ನನಗಿದ್ದ ನಂಬುಗೆ ಮತ್ತು ಗೌರವದ ಕಾರಣದಿಂದ ಇಲ್ಲಿಯವರೆಗೆ ಮೌನವಾಗಿದ್ದೆ. ಆದರೆ, ಅಮಿತ್ ಷಾ ಅವರಂಥ ಕ್ಷುದ್ರ ಶಕ್ತಿಯ ಪ್ರಭಾವಕ್ಕೆ ಒಳಗಾದ ನಾವು ನಂಬಿದ್ದ `ದೇವರು' ನಮ್ಮ ಪರ ಧ್ವನಿಯನ್ನೇ ಎತ್ತಲಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT