ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ವಿರುದ್ಧ ಸಿಎಜಿ ಗುಡುಗು

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗಾಂಧಿನಗರ (ಪಿಟಿಐ): ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ ಕೆಲ ಬೃಹತ್ ಉದ್ಯಮ ಸಮೂಹಗಳಿಗೆ ಅನಗತ್ಯ ಲಾಭ ಮಾಡಿಕೊಡುವ ಮೂಲಕ ಸರ್ಕಾರಿ ಬೊಕ್ಕಸಕ್ಕೆ ರೂ.580 ಕೋಟಿಯಷ್ಟು ನಷ್ಟ ಉಂಟು ಮಾಡಿದೆ ಎಂದು ಮಹಾಲೇಖಪಾಲರು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರಿಸ್, ಎಸ್ಸಾರ್ ಸ್ಟೀಲ್, ಅದಾನಿ ಪವರ್ ಲಿಮಿಟೆಡ್ ಇತ್ಯಾದಿ ಕಂಪೆನಿಗಳಿಗೆ ಮೋದಿ ಸರ್ಕಾರ ಲಾಭ ಮಾಡಿಕೊಟ್ಟಿದೆ ಎಂದು 2012ನೇ ಸಾಲಿನ ಮಹಾಲೇಖಪಾಲರ ವರದಿ ತಿಳಿಸಿದೆ. ಗುಜರಾತ್ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾದ ವರದಿಯ ಪ್ರಕಾರ, ಆಟೊಮೊಬೈಲ್ ಕಂಪೆನಿ `ಫೋರ್ಡ್' ಹಾಗೂ ನಿರ್ಮಾಣ ಕಂಪೆನಿ `ಲಾರ್ಸನ್ ಮತ್ತು ಟುಬ್ರೊ'ಗೆ ಜಾಗ ನೀಡುವಾಗ ನಿಯಮಾವಳಿ ಉಲ್ಲಂಘಿಸಲಾಗಿದ್ದು, ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT