ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹೇಳಿಕೆ: ಮುಸ್ಲಿಂ ಮುಖಂಡರ ಶ್ಲಾಘನೆ

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಲಖನೌ (ಐಎಎನ್‌ಎಸ್): ‘ಭಾರತದ ಮುಸ್ಲಿಮರು ದೇಶಕ್ಕಾಗಿಯೇ ಬದುಕಿ ದೇಶಕ್ಕಾಗಿಯೇ ಸಾಯುತ್ತಾರೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಉತ್ತರಪ್ರದೇಶದ ಮುಸ್ಲಿಂ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಇಸಿಫಿ ಮಸೀದಿಯ ಇಮಾಮ್‌ ಮೌಲಾನಾ ಕಲ್ಬೆ ಜವ್ವದ್‌ ಅವರು ಪ್ರತಿ­ಕ್ರಿಯಿಸಿ, ಮುಸಲ್ಮಾನರ ರಾಷ್ಟ್ರಪ್ರೇಮ­ವನ್ನು

ಮಾಯಾವತಿ ಟೀಕೆ
ಲಖನೌ(ಪಿಟಿಐ): ಪ್ರಧಾನಿ   ಹೇಳಿಕೆ ಕ್ಷುಲ್ಲಕ ರಾಜಕೀಯ ಹಿತಾ­ಸಕ್ತಿ­ಯಿಂದ ಕೂಡಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಟೀಕಿಸಿ­ದ್ದಾರೆ.

ಪ್ರಧಾನಿಯವರು ಸಮರ್ಪಕ­ವಾಗಿ ಅರ್ಥೈಸಿಕೊಂಡಿರುವ ಕಾರಣ ದೇಶದ ಮುಸ್ಲಿಮರು ಈಗ ನಿರಾಳ­ವಾಗಿ ಉಸಿರಾಡಬಹುದು ಎಂದಿದ್ದಾರೆ.

ಪ್ರಧಾನಿ ಹೇಳಿಕೆಯ ಬಗ್ಗೆ ಸಂಶಯ­ಪಡಬೇಕಾದ್ದು ಏನೂ ಇಲ್ಲ ಎಂದು ತೀಲಿ ವಾಲಿ ಮಸೀದಿಯ ಪಾದ್ರಿ ಮೌಲಾನಾ ಫಜ್ಲುಲ್‌ ರೆಹಮಾನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಈಶ್‌ಬಾಗ್ ಈದ್ಗಾದ ಮುಖ್ಯಸ್ಥ­ರಾದ ಮೌಲಾನಾ ಖಾಲಿದ್‌ ರಶೀದ್‌ ಫಾರಂಗಿ ಮಹಾಲಿ ಪ್ರತಿಕ್ರಿಯಿಸಿ, ಭಾರತದ ಮುಸಲ್ಮಾನರು ಸದಾ ದೇಶಕ್ಕೆ ನಿಷ್ಠರಾಗಿರುತ್ತಾರೆ. ಬಿಜೆಪಿ ನಾಯ­ಕರು ಮುಸ್ಲಿಮರ ಮೇಲೆ ಆರೋಪ ಹೊರಿಸುತ್ತಿರುವು­ದನ್ನು ತಡೆ­ಯ­­­ಬೇಕು ಎಂದಿದ್ದಾರೆ.
ದೇವ್‌ಬಾದ್ ದಾರುಲ್‌ ಉಲೂಮ್‌ ಮೌಲಾನಾ ನಸೀಮ್‌ ಅಖ್ತರ್‌ ಶಾ ಕೈಸರ್‌ ಅವರೂ ಮೋದಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT