ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಆಜೀವ ನಿಷೇಧ?

ಸೆ. 25 ರಂದು ಬಿಸಿಸಿಐ ವಿಶೇಷ ಸಭೆ
Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮಾಜಿ ಮುಖ್ಯಸ್ಥ ಲಲಿತ್ ಮೋದಿ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಜೀವ ನಿಷೇಧ ಹೇರುವ ಸಾಧ್ಯತೆಯಿದೆ. ಸೆಪ್ಟೆಂಬರ್ 25ರಂದು ಚೆನ್ನೈನಲ್ಲಿ ನಡೆಯಲಿರುವ ಮಂಡಳಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ.

ಮೋದಿ ಮೇಲಿನ ಆರೋಪದ ಕುರಿತಂತೆ ತನಿಖೆ ನಡೆಸಲು ಬಿಸಿಸಿಐ ಜ್ಯೋತಿರಾದಿತ್ಯ ಸಿಂಧ್ಯ ಮತ್ತು ಅರುಣ್ ಜೇಟ್ಲಿ ಅವರನ್ನೊಳಗೊಂಡ ಶಿಸ್ತು ಸಮಿತಿ ನೇಮಿಸಿತ್ತು. ಶಿಸ್ತು ಸಮಿತಿ ಸಲ್ಲಿಸಿದ ವರದಿಯ ಕುರಿತು ಕೋಲ್ಕತ್ತದಲ್ಲಿ ಭಾನುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ.

`ಮೋದಿ ಮೇಲೆ ಆಜೀವ ನಿಷೇಧ ಹೇರಬೇಕೆಂಬ ಸಲಹೆಯನ್ನು ಈ ವರದಿ ನೀಡಿದೆ. ಅವರ ಭವಿಷ್ಯ ನಿರ್ಧರಿಸಲಿಕ್ಕಾಗಿ ಸೆ. 25 ರಂದು ಚೆನ್ನೈನಲ್ಲಿ ಮಂಡಳಿಯ ವಿಶೇಷ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಮೋದಿ ಆಜೀವ ನಿಷೇಧಕ್ಕೆ ಒಳಗಾಗುವ ಸಾಧ್ಯತೆಯೇ ಅಧಿಕ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಜೀವ ನಿಷೇಧ ಹೇರಬೇಕಾದರೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ದೊರೆಯಬೇಕು. ಅಂದರೆ ಮಂಡಳಿಯ ಕನಿಷ್ಠ 21 ಸದಸ್ಯರು ನಿಷೇಧ ಶಿಕ್ಷೆಯ ಪರ ನಿಲ್ಲಬೇಕು.

ಮೋದಿ ಮೊದಲ ಮೂರು ವರ್ಷಗಳ ಕಾಲ ಐಪಿಎಲ್‌ನ ಮುಖ್ಯಸ್ಥರಾಗಿದ್ದರು. ಆದರೆ 2010ರ ಋತುವಿನ ಟೂರ್ನಿಯ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿತ್ತು. ಹಣಕಾಸಿನ ಅವ್ಯವಹಾರ ನಡೆಸಿದ ಆರೋಪದಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT