ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ವೀಸಾ ನಿರಾಕರಣೆ: ಬಿಜೆಪಿ ಬೆಂಬಲಿಗರ ಆಕ್ಷೇಪ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ನೀಡುವುದರ ವಿರುದ್ಧ ಅಮೆರಿಕ ಸಂಸತ್ ಸದಸ್ಯರು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ಪತ್ರ ಬರೆದಿರುವುದಕ್ಕೆ ಅಮೆರಿಕದಲ್ಲಿರುವ ಬಿಜೆಪಿ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೀಸಾಕ್ಕಾಗಿ ಮೋದಿ ಅವರು ಮನವಿ ಸಲ್ಲಿಸದೇ ಇರುವಾಗ ಈ ಪತ್ರವನ್ನು ಬರೆಯುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿರುವ ಅಮೆರಿಕದ ಬಿಜೆಪಿ ಘಟಕ, `ಈ ರೀತಿ ಪತ್ರ ಬರೆಯುವ ಮೂಲಕ ಅಮೆರಿಕದ ಸಂಸದರು ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಯತ್ನಿಸುತ್ತಿದ್ದಾರೆ' ಎಂದು ದೂಷಿಸಿದೆ.

ಮೋದಿ ಅವರಿಗೆ ವೀಸಾ ನಿರಾಕರಿಸುವ ನೀತಿಯನ್ನು ಒಬಾಮ ಆಡಳಿತ ಮುಂದುವರಿಸಬೇಕು ಎಂದು ಒತ್ತಾಯಿಸಿ 25 ಪ್ರಭಾವಿ ಸಂಸದರು ಹಿಲರಿ ಕ್ಲಿಂಟನ್ ಅವರಿಗೆ ಪತ್ರ ಬರೆದಿದ್ದರು.

ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸುವ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಶುಕ್ರವಾರ ಹೇಳಿತ್ತು.
ಸಂಸದರು ಬರೆದಿರುವ ಪತ್ರಕ್ಕೆ ಕ್ಲಿಂಟನ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT