ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ಬೋಧನೆಗೆ ರಾಜಕೀಯ ದೃಷ್ಟಿ ಬೇಡ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಧರ್ಮ ಮತ್ತು ಮೌಲ್ಯ ಬೋಧನೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಹೇಳಿದರು.

ಸತ್ಯಸಾಯಿ ಸೇವಾ ಸಮಿತಿ, ಈಶ್ವರಮ್ಮ ಟ್ರಸ್ಟ್, ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಶ್ರಯದಲ್ಲಿ ಇಲ್ಲಿ ಭಾನುವಾರ ನಡೆದ, ಸತ್ಯಸಾಯಿ ಶಾಲೆಗಳ ರಾಜ್ಯ ಮಟ್ಟದ `ಮೌಲ್ಯೋತ್ಸವ~ ಸಮಾರೋಪದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಚಾರಿತ್ರ್ಯ ನಿರ್ಮಿಸಬೇಕು. ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ನಿರೀಕ್ಷೆ, ಭರವಸೆಗಳು ಇವೆ ಎಂದರು.

 ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು,ಮೌನ ತಪಸ್ಸನ್ನು ಸತ್ಯಸಾಯಿ ಶಿಕ್ಷಣಸಂಸ್ಥೆ ಮಾಡುತ್ತಿವೆ ಎಂದರು.

ಪೂರ್ವ ವಲಯ ಐಜಿಪಿ ಸಂಜಯ್ ಸಹಾಯ್, ಮೌಲ್ಯಗಳನ್ನು ಉತ್ಸವ ವಾಗಿ ಆಚರಿಸುತ್ತಿರುವುದು ಸಂತಸ. ಇದು ಜೀವನಕ್ಕೆ ಹೊಸ ಬೆಳಕು, ಜ್ಞಾನ ತರಬೇಕು.ಇಲ್ಲಿನ ಆತ್ಮೀಯತೆ ಕುಟುಂಬ ವಾತಾವರಣ ಸೃಷ್ಟಿಸಿದೆ. ಇದು ಅತ್ಯುನ್ನತ ಉತ್ಸವ. ಸಾಯಿಬಾಬಾ ಬೋಧಿಸಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉದ್ಯಮಿ ಸಿ. ಕೇಶವಮೂರ್ತಿ, ಸತ್ಯಸಾಯಿ ಶಾಲೆಗಳ ರಾಜ್ಯ ಸಂಯೋಜಕ ಚನ್ನಪ್ಪಗೌಡ, ಸತ್ಯಸಾಯಿಸೇವಾ ಸಂಸ್ಥೆಗಳ ರಾಜ್ಯ ಘಟಕ ಅಧ್ಯಕ್ಷ ನಾಗೇಶ್ ಜಿ. ಧಾಕಪ್ಪ, ಜಿಲ್ಲಾ ಅಧ್ಯಕ್ಷ ವಿಜಯಾನಂದ್ ಉಪಸ್ಥಿತರಿದ್ದರು. ಕೆ.ಆರ್. ಮಂಜುನಾಥ್ ಸ್ವಾಗತಿಸಿದರು. ಜಗನ್ನಾಥ ನಾಡಿಗೇರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT