ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯವರ್ಧಿತ ಸೇವೆಗೆ ಹೆಚ್ಚಿದ ಬೇಡಿಕೆ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಮೊಬೈಲ್ ಮಾತು

ಅಗ್ಗದ ದರದ ಹ್ಯಾಂಡ್‌ಸೆಟ್‌ಗಳು ಮತ್ತು ಇಂಟರ್‌ನೆಟ್ ಸೇವೆ ವಿಸ್ತರಣೆಯಿಂದ ದೇಶದ ಮೊಬೈಲ್ ಮೌಲ್ಯವರ್ಧಿತ ಸೇವೆಗಳ (ಎಂವಿಎಎಸ್) ಮಾರುಕಟ್ಟೆ 2013ರ  ಅಂತ್ಯದ ವೇಳೆಗೆ ರೂ 33,280 ಕೋಟಿಗಳಷ್ಟಾಗಲಿದೆ!

ಈ ಮಾಹಿತಿ ಬಂದಿರುವುದು ಭಾರತೀಯ ಇಂಟರ್‌ನೆಟ್ ಮತ್ತು ಮೊಬೈಲ್ ಸೇವಾ ಸಂಸ್ಥೆಗಳ ಒಕ್ಕೂಟ(ಐಎಎಂಎಐ). ಈ ಅಂಶವನ್ನು ಅದು ಸಮೀಕ್ಷೆ ನಡೆಸಿ ಕಂಡುಕೊಂಡಿದೆ.

ರಿಂಗ್‌ಟೋನ್‌ನಿಂದ ಹಿಡಿದು ಎಸ್‌ಎಂಎಸ್, ಅಪ್ಲಿಕೇಷನ್‌ವರೆಗೂ `ಎಂವಿಎಎಸ್~ ಮಾರುಕಟ್ಟೆ ಹರವು ವಿಸ್ತಾರಗೊಂಡಿದೆ. ಇದರ ವ್ಯಾಪ್ತಿಗೇ ಬರುವ ಕ್ರಿಕೆಟ್ ಮಾಹಿತಿ, ನಿತ್ಯ ಭವಿಷ್ಯ, ವಾಲ್ ಪೇಪರ್ ಮಾರುಕಟ್ಟೆಯೇ ಸದ್ಯ  ರೂ26 ಸಾವಿರ ಕೋಟಿಗಳಷ್ಟಿದ್ದು, ಇದು ಭಾರಿ ವೇಗದಲ್ಲಿ ದ್ವಿಗುಣಗೊಳ್ಳುತ್ತಿದೆ.
 
ಮುಖ್ಯವಾಗಿ 2012ರ ಮಾರ್ಚ್‌ವರೆಗಿನ ಅಂಕಿ-ಅಂಶಗಳ ಪ್ರಕಾರವೇ ದೇಶದಲ್ಲಿ 480 ಲಕ್ಷ   ಮೊಬೈಲ್ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಹಾಗಾಗಿ `ಎಂವಿಎಎಸ್~ ಮಾರುಕಟ್ಟೆ ಬೆಳವಣಿಗೆಗೆ ವಿಪುಲ ಅವಕಾಶವಿದೆ ಎಂದಿದೆ ಈ ಅಧ್ಯಯನ.

ಪ್ರತಿ ಬಳಕೆದಾರನಿಂದ ಬರುವ ಸರಾಸರಿ ವರಮಾನವೇನೋ (ಎಆರ್‌ಪಿಯು) ಕಳೆದ ಎರಡು ವರ್ಷಗಳಲ್ಲಿ ಕುಸಿದಿರಬಹುದು. ಆದರೆ,  `ಎಂವಿಎಎಸ್~ ಮಾರುಕಟ್ಟೆಯ ಗಾತ್ರ ಮಾತ್ರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 28ರಷ್ಟು ಪ್ರಗತಿ ಕಂಡಿದೆ. ಸದ್ಯ ಇದು `ಎಆರ್‌ಪಿಯು~ಗಿಂತಲೂ ಶೇ 27ರಷ್ಟು ಹೆಚ್ಚೇ ಇದೆ. 

2011ರ ಡಿಸೆಂಬರ್‌ವರೆಗಿನ ಅಂಕಿ-ಅಂಶದಂತೆ ದೇಶದಲ್ಲಿ ಪ್ರತಿ `ಜಿಎಸ್‌ಎಂ~ ಬಳಕೆದಾರನಿಂದ ಬರುವ ಸರಾಸರಿ ವರಮಾನ ರೂ96ರಷ್ಟಿತ್ತು. `ಸಿಡಿಎಂಎ~ ಗ್ರಾಹಕನ `ಎಆರ್‌ಪಿಯು~ ರೂ73ರಷ್ಟಿದೆ. ಧ್ವನಿ ಆಧಾರಿತ ಸೇವೆಗಳಿಗೆ ಬೇಡಿಕೆ ತಗ್ಗಿರುವುದೇ ಸರಾಸರಿ ವರಮಾನ ಕುಸಿಯಲು ಪ್ರಮುಖ ಕಾರಣ ಎನ್ನುತ್ತದೆ ಅಧ್ಯಯನ.


ಮೊಬೈಲ್ ಫೋನ್‌ನ ಮೌಲ್ಯವರ್ಧಿತ ಸೇವೆಗಳಲ್ಲಿ ರಿಂಗ್‌ಟೋನ್ ಪಾಲೇ ಶೇ 27    ರಷ್ಟಿದೆ. `ಎಸ್‌ಎಂಎಸ್~ ಅಪ್ಲಿಕೇಷನ್ ಶೇ 17 ಮತ್ತು ಮೊಬೈಲ್ ಅಪ್ಲಿಕೇಷನ್ ಮತ್ತು ಗೇಮಿಂಗ್ ಮಾರುಕಟ್ಟೆ ಪಾಲು ಕ್ರಮವಾಗಿ ಶೇ 10 ಮತ್ತು ಶೇ 8ರಷ್ಟಿದೆ.

ಧ್ವನಿ ಸೇವೆಗಳ ವರಮಾನ ಇಳಿದಿದ್ದರೂ, ದತ್ತಾಂಶ ಆಧಾರಿತ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ `ಎಆರ್‌ಪಿಯು~ ಶೇ 5ರಿಂದ ಶೇ 8ರಷ್ಟು ಹೆಚ್ಚಬಹುದು ಎಂಬುದೂ ಈ ಅಧ್ಯಯನದಿಂದಲೇ ತಿಳಿದುಬರುತ್ತದೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT