ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನೇಜರ್‌ಗಳಿಗೆ ಕ್ರೀಡಾಧಾರಿತ ಶಿಕ್ಷಣ: ಐಐಎಂ-ಬಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬೆಂಗಳೂರಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ-ಬಿ) ಹಿರಿಯ ಮ್ಯಾನೇಜರ್‌ಗಳಿಗೆ ಕ್ರೀಡಾಧಾರಿತ ಶಿಕ್ಷಣ ನೀಡಲು ಮುಂದಾಗಿದೆ.

`ವ್ಯವಹಾರದ ವೇಳೆ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಇದು ನೆರವಾಗಬಹುದು ಎಂಬುದು ಐಐಎಂ-ಬಿನ ಉದ್ದೇಶ. ಖ್ಯಾತ ಕ್ರೀಡಾಪಟುಗಳನ್ನು ಆಹ್ವಾನಿಸಿ ಶಿಕ್ಷಣ ನೀಡಲಾಗುವುದು. ಇದಕ್ಕೆ ಕ್ರೀಡಾ ಕಂಪೆನಿ ಟೆನ್ವಿಕ್ ಸಹಾಯ ನೀಡುತ್ತಿದೆ~ ಎಂದು ಐಐಎಂ-ಬಿ ಅಧಿಕಾರಿ ಶ್ಯಾಮಲ್ ರಾಯ್ ತಿಳಿಸಿದ್ದಾರೆ.

`ಈ ಕಾರ್ಯಕ್ರಮದಲ್ಲಿ ಮ್ಯಾನೇಜರ್‌ಗಳೊಂದಿಗೆ ಕ್ರೀಡಾಪಟುಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಇದರಿಂದ ನಾಯಕತ್ವ ಗುಣ ಹೆಚ್ಚಿಸಿಕೊಳ್ಳಲು. ಕೌಶಲ ಪ್ರದರ್ಶಿಸಲು ಹಾಗೂ ಒತ್ತಡದಿಂದ ಹೊರಬರಲು ಸಹಾಯವಾಗಬಹುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT