ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾರಥಾನ್: ಜಯಗಳಿಸಿದ ರೋಬೋವಿ-ಪಿಸಿ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): ಜಪಾನಿನ ಒಸಾಕಾದಲ್ಲಿ ನಡೆದ ವಿಶ್ವದ ಮೊಟ್ಟಮೊದಲ ರೊಬೋಟ್‌ಗಳ ಪೂರ್ಣ ಮ್ಯಾರಥಾನ್ ಸ್ಫರ್ಧೆಯಲ್ಲಿ 42 ಕಿ.ಮೀ ದೂರವನ್ನು ತನ್ನ ಸಮೀಪದಲ್ಲಿದ್ದ ಸ್ಪರ್ಧಿ ರೋಬೋಟ್‌ಗಿಂತ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕ್ರಮಿಸುವ ಮೂಲಕ ರೋಬೋವೀ-ಪಿಸಿ ರೋಚಕ ಗೆಲುವು ಪಡೆದಿದೆ. ಒಳಾಂಗಣ ಟ್ರ್ಯಾಕ್‌ನಲ್ಲಿ 423 ಲ್ಯಾಪ್ಸ್‌ಗಳಲ್ಲಿ 42 ಕಿ.ಮೀ.ದೂರವನ್ನು ಗಂಟೆಗೆ ಸರಾಸರಿ 0.77 ಕಿ.ಮೀ. ವೇಗದಲ್ಲಿ ತಲುಪಬೇಕಿದ್ದ ಈ ಸ್ಫರ್ಧೆಯಲ್ಲಿ ಐದು ರೋಬೋಟ್‌ಗಳು ಭಾಗವಹಿಸಿದ್ದವು.

ಕ್ಷಣಗಳ ಅಂತರದಲ್ಲಿ ಎರಡು ರೋಬೋಟ್‌ಗಳು ಅಂತಿಮ ಗುರಿ ತಲುಪಿದರೆ, ಎರಡು ರೋಬೋಟ್‌ಗಳು ಇನ್ನೂ ಗುರಿ ತಲುಪಬೇಕಿವೆ. ಇನ್ನೊಂದು ರೋಬೋಟ್‌ಅನ್ನು ಮೊದಲನೇ ಲ್ಯಾಪ್ ಬಳಿಕ ಸ್ಪರ್ಧೆಯಿಂದ ಹೊರಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT