ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್ ಎಸ್‌ಐಪಿ ರದ್ದು

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಬಂಡವಾಳ ಸ್ವೀಕರಿಸುವುದಕ್ಕೆ  ಮುಕ್ತಾಯ ಹಾಡಿ, `ಒನ್ ಪ್ಲಾನ್-ಒನ್ ಸ್ಕೀಂ~ ವ್ಯವಸ್ಥೆ ಜಾರಿಗೆ ತರುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮ್ಯೂಚುವಲ್ ಫಂಡ್ ನಿರ್ವಹಣೆ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಈವರೆಗೂ `ಎಸ್‌ಐಪಿ~ ವ್ಯವಸ್ಥೆ ಮೂಲಕವೇ  100ಕ್ಕೂ ಹೆಚ್ಚು ಯೋಜನೆಗಳಿಗೆ ಮ್ಯೂಚುವಲ್ ಫಂಡ್ ಸಂಸ್ಥೆಗಳು ಹೂಡಿಕೆ ಸ್ವೀಕರಿಸುತ್ತಿದ್ದವು. ಆದರೆ, ಅ. 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು, ಎಸ್‌ಪಿಐ~ ರದ್ದುಗೊಂಡಿದೆ. 
`ಎಸ್‌ಐಪಿ~ ವ್ಯವಸ್ಥೆಯಡಿ ಹೂಡಿಕೆದಾರರು ಮಾಸಿಕ ಕನಿಷ್ಠ ರೂ100 ಹೂಡಿಕೆ ಮಾಡಬಹುದಿತ್ತು. ಇದರಿಂದ ಈ ಯೋಜನೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು.

`ಸೆಬಿ~ ನಿಯಮ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಈಗಾಗಲೇ ಹೂಡಿಕೆದಾರರಿಗೆ ಸೂಚನೆ ನೀಡಿವೆ.

ಇನ್ನು ಮುಂದೆ ಸಣ್ಣ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳಲ್ಲಿ ವಾರ್ಷಿಕ ರೂ20 ಸಾವಿರದವರೆಗೆ ಹೂಡಿಕೆ ಮಾಡಲು `ಪ್ಯಾನ್ ಕಾರ್ಡ್~ ಅಗತ್ಯ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು  `ಸೆಬಿ~ ಸಡಿಲಿಸಿದೆ. ಆದರೆ, ಮರು ಪಾವತಿ ಮಾತ್ರ ಬ್ಯಾಂಕ್ ಖಾತೆಯ ಮೂಲಕವೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಇಲ್ಲಿ ಭಾರತೀಯ ಗ್ರಾಹಕ ಒಕ್ಕೂಟ ಆರೋಗ್ಯ ವಿಮೆಗೆ ಸಂಬಂಧಿಸಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ `ಸೆಬಿ~ ಅಧ್ಯಕ್ಷ ಯು.ಕೆ ಸಿನ್ಹಾ, `ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಉತ್ತಮ ವ್ಯವಸ್ಥೆ ಇಲ್ಲ. ರಾಜ್ಯ ಸರ್ಕಾರಗಳ ಆರೋಗ್ಯ ವಿಮೆ ಯೋಜನೆಗಳು ಮಾತ್ರ ಯಶಸ್ಸು ಕಂಡಿವೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT