ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂಗ್ ಓರಿಯನ್ಸ್‌ಗೆ ಜಯ

Last Updated 11 ಸೆಪ್ಟೆಂಬರ್ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಯಂಗ್ ಓರಿಯನ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಎನ್‌ಬಿಎ ಚಾಲೆಂಜ್ ಬ್ಯಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಅಂಗಳದಲ್ಲಿ ಭಾನುವಾರ ನಡೆದ ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಪಂದ್ಯದಲ್ಲಿ ಯಂಗ್ ಓರಿಯನ್ಸ್ 46-22 ರಲ್ಲಿ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿತು. ವರುಣ್ (10 ಪಾಯಿಂಟ್) ಅವರು ಓರಿಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಐಬಿಬಿಸಿ 38-35 ರಲ್ಲಿ ಭಾರತ್ ವಿರುದ್ಧವೂ, ವಿವೇಕ್ಸ್ 30-5 ರಲ್ಲಿ ಡಿಆರ್‌ಡಿಒ ಎದುರೂ ಗೆಲುವು ಪಡೆದವು. 16 ಪಾಯಿಂಟ್ ಕಲೆಹಾಕಿದ ಸಲ್ಮಾನ್ ಐಬಿಬಿಸಿ ತಂಡದ ರೋಚಕ ಗೆಲುವಿಗೆ ಕಾರಣರಾದರು.

ಪುರುಷರ ವಿಭಾಗದ ಪಂದ್ಯದಲ್ಲಿ ಎಎಸ್‌ಸಿ 47-36 ರಲ್ಲಿ ಭಾರತ್ ಕ್ಲಬ್ ತಂಡವನ್ನು ಸೋಲಿಸಿತು. ವೆಳಿಯಪ್ಪನ್ (17 ಪಾಯಿಂಟ್) ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು. ಮತ್ತೊಂದು ಪಂದ್ಯದಲ್ಲಿ ಸದರ್ನ್ ಬ್ಲೂಸ್ 72-63 ರಲ್ಲಿ ಸಿಎಂಪಿ ವಿರುದ್ಧ ಜಯ ಸಾಧಿಸಿತು. ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡ 47-42 ರಲ್ಲಿ ಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT